ಸಿಬಿಐನ ನೂತನ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ನೇಮಕ

ನವದೆಹಲಿ: ಸಿಬಿಐನ ನೂತನ ಅಧ್ಯಕ್ಷರಾಗಿ ಹಿರಿಯ ಐಪಿಎಸ್ ಅಧಿಕಾರಿ​ ರಿಷಿ ಕುಮಾರ್​ ಶುಕ್ಲಾ ನೇಮಕಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಶುಕ್ಲಾ ಅವರನ್ನು ಸಿಬಿಐ ನ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಶುಕ್ಲಾ ಈ ಹಿಂದೆ ಮಧ್ಯಪ್ರದೇಶದ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು.

ಅಲೋಕ್​ ವರ್ಮಾ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ನಾಗೇಶ್ವರ ರಾವ್ ಅವರನ್ನ ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿತ್ತು.
ಸ್ವತಂತ್ರ ನಿರ್ದೇಶಕ ಸ್ಥಾನಕ್ಕೆ ಹೊಸ ನೇಮಕ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿ ಮುಖ್ಯ ನ್ಯಾಯಮೂರ್ತಿ, ರಂಜನ್​ ಗೊಗೊಯ್​ ಹಾಗೂ ಕಾಂಗ್ರೆಸ್​ ಸಂಸದಿಯ ಮಂಡಳಿ ನಾಯಕ ಮಲ್ಲಿಕಾರ್ಜುನ್​ ಖರ್ಗೆವೊಳಗೊಂಡ ಸಮಿತಿ ಜನವರಿ 24ರಂದು ಸಭೆ ಸೇರಿ ಚರ್ಚೆ ನಡೆಸಿತ್ತು. ಅಂದು ಯಾವುದೇ ನಿರ್ಧಾರ ಕೈಗೊಳ್ಳಲು ಸಮಿತಿ ವಿಫಲವಾಗಿತ್ತು. ಮತ್ತೆ ನಿನ್ನೆ ಸಭೆ ಸೇರಿದ ಸಮಿತಿ ಐಪಿಎಸ್​ ಅಧಿಕಾರಿ ರಿಷಿ ಕುಮಾರ್​ ಶುಕ್ಲಾ ಅವರನ್ನ ಆಯ್ಕೆ ಮಾಡಿತ್ತು.

ಈ ಸಮಿತಿ ನಿರ್ಣಯದಂತೆ ಕೇಂದ್ರ ಸರ್ಕಾರ ಇಂದು ಶುಕ್ಲಾ ಅವರನ್ನ ಸಿಬಿಐ ಹೊಸ ನಿರ್ದೇಶಕರನ್ನಾಗಿ ನಿಯುಕ್ತಗೊಳಿಸಿ ಆದೇಶ ಹೊರಡಿಸಿದೆ.

PM-led panel appoints IPS officer Rishi Kumar Shukla as new CBI Director

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ