ನವದೆಹಲಿಯಲ್ಲಿ ನಡೆದ ಪರೇಡ್‍ನಲ್ಲಿ ಮೊದಲ ಸ್ಥಾನ ಗಳಿಸಿದ ಕರ್ನಾಟಕ-ಗೋವಾ ಎನ್‍ಸಿಸಿ ಕೆಡೆಟ್‍ಗಳು

ಬೆಂಗಳೂರು,ಫೆ.2- ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆದ ಪೆರೇಡ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ-ಗೋವಾದ ಎನ್‍ಸಿಸಿ ಕೆಡೆಟ್‍ಗಳು ಈ ಬಾರಿ ಮೊದಲ ಸ್ಥಾನ ಗಳಿಸಿವೆ ಎಂದು ಬ್ರಿಗೇಡಿಯರ್ ಪೂರ್ವಿ ಮಠ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 2004ರಲ್ಲಿ ಮೊದಲ ಸ್ಥಾನ ಪಡೆದಿದ್ದ ಕರ್ನಾಟಕದ ಎನ್‍ಸಿಸಿ ಕೆಡೆಟ್‍ಗಳು 15 ವರ್ಷಗಳ ಬಳಿಕ ಪಥ ಸಂಚಲನದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

ಈ ತಂಡದಲ್ಲಿ 97 ಮಂದಿ ಕರ್ನಾಟಕದವರು ಹಾಗೂ 9 ಮಂದಿ ಗೋವಾದವರು ಸೇರಿದಂತೆ ಒಟ್ಟು 106 ಮಂದಿ ಪಥ ಸಂಚಲನದಲ್ಲಿದ್ದರು. ಅದರಲ್ಲಿ 71 ಮಂದಿ ವಿದ್ಯಾರ್ಥಿಗಳು 35 ಮಂದಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಎಲ್ಲಾ ಜಿಲ್ಲೆಗಳಿಂದ ಆಯ್ಕೆ ಮಾಡಿದ ಕೆಡೆಟ್‍ಗಳಿಗೆ ತರಬೇತಿ ನೀಡಲಾಗಿತ್ತು. ಇಂದು ಅದಕ್ಕೆ ತಕ್ಕ ಗೌರವ ಸಂದಿದೆ.ಎನ್‍ಸಿಸಿ ನಿರ್ದೇಶನಾಲಯದಿಂದಲೂ ವಿಶಿಷ್ಟ ಮೆಡಲ್ ನೀಡಲಾಗುತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ