27.84 ಲಕ್ಷ ಕೋಟಿ ವೆಚ್ಚದ ಬಜೆಟ್‍ ಮಂಡನೆ

ನವದೆಹಲಿ: ಒಟ್ಟು 27.84 ಲಕ್ಷ ಕೋಟಿ ಖರ್ಚಿನ ಬಜೆಟ್‍ನ್ನು ಮಂಡಿಸಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಪಿಯೂಷ್ ಗೋಯಲ್ ಅವರು, ರಕ್ಷಣಾ ಇಲಾಖೆಗೆ ಸಿಂಹಪಾಲು ಅನುದಾನ ಹಂಚಿಕೆ ಮಾಡಿದ್ದಾರೆ.

ರಕ್ಷಣಾ ಇಲಾಖೆಗೆ 3,05,296 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ. ಪಿಂಚಣಿ ಯೋಜನೆಗಾಗಿ 1.74 ಲಕ್ಷ ಕೋಟಿಯನ್ನು, ದೊಡ್ಡ ಪ್ರಮಾಣದ ಸಬ್ಸಿಡಿಗಾಗಿ 2.96 ಲಕ್ಷ ಕೋಟಿ, ಕೃಷಿ ಮತ್ತು ಅದರ ಸಹ ಚಟುವಟಿಕೆಗಳಿಗೆ 1.49 ಲಕ್ಷ ಕೋಟಿ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ 27 ಸಾವಿರ ಕೋಟಿ, ಈಶಾನ್ಯ ಭಾಗದ ಅಭಿವೃದ್ಧಿಗೆ 3 ಸಾವಿರ ಕೋಟಿ, ಶಿಕ್ಷಣ ಕ್ಷೇತ್ರಕ್ಕೆ 93 ಸಾವಿರ ಕೋಟಿ ಅನುದಾನ ನಿಗದಿ ಮಾಡಿದ್ದಾರೆ.

 

ಇಂಧನ ಕ್ಷೇತ್ರಕ್ಕೆ 44 ಸಾವಿರ ಕೋಟಿ, ವಿದೇಶಾಂಗ ಇಲಾಖೆಗೆ 16 ಸಾವಿರ ಕೋಟಿ, ಹಣಕಾಸು ಇಲಾಖೆಗೆ 19 ಸಾವಿರ ಕೋಟಿ, ಆರೋಗ್ಯ ಕ್ಷೇತ್ರಕ್ಕೆ 63 ಸಾವಿರ ಕೋಟಿ, ಗೃಹ ಇಲಾಖೆಗೆ 1.03ಲಕ್ಷ ಕೋಟಿ, ಬಡ್ಡಿ ಪಾವತಿಗೆ 6.65 ಲಕ್ಷ ಕೋಟಿ, ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಕ್ಷೇತ್ರಕ್ಕೆ 21 ಸಾವಿರ ಕೋಟಿ, ಯೋಜನೆ ಮತ್ತು ಸಾಂಖ್ಯಿಕ ಕ್ಷೇತ್ರಕ್ಕೆ 5 ಸಾವಿರ ಕೋಟಿ, ಗ್ರಾಮೀಣಾಭಿವೃದ್ಧಿಗೆ 1.38ಲಕ್ಷ ಕೋಟಿ, ವಿಜ್ಞಾನ ಇಲಾಖೆಗೆ 26 ಸಾವಿರ ಕೋಟಿ, ಸಮಾಜ ಕಲ್ಯಾಣ ಕ್ಷೇತ್ರಕ್ಕೆ 49 ಸಾವಿರ ಕೋಟಿ, ತೆರಿಗೆ ಆಡಳಿತ ಕ್ಷೇತ್ರಕ್ಕೆ 1.17 ಲಕ್ಷ ಕೋಟಿ, ರಾಜ್ಯಗಳಿಗೆ ಹಂಚಿಕೆ ಮಾಡಲು 1.66 ಲಕ್ಷ ಕೋಟಿ, ಸಾರಿಗೆ ಕ್ಷೇತ್ರಕ್ಕೆ 1.56 ಲಕ್ಷ ಕೋಟಿ, ಕೇಂದ್ರಾಡಳಿತ ಪ್ರದೇಶಗಳಿಗೆ 15 ಸಾವಿರ ಕೋಟಿ, ನಗರಾಭಿವೃದ್ಧಿ ಇಲಾಖೆಗೆ 48 ಸಾವಿರ ಕೋಟಿ, ಇತರ ವೆಚ್ಚಗಳಿಗೆ 75 ಸಾವಿರ ಕೋಟಿಗಳನ್ನು ನಿಗದಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ