ಬೆಂಗಳೂರು, ಫೆ.1- ವಿಧಾನಸಭೆ ಹೊರಗೆ ಶಾಸಕರ ನಡವಳಿಕೆಗಳು ಸಭಾಧ್ಯಕ್ಷರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪೀಕರ್ ರಮೇಶ್ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪ್ರಕರಣಗಳಲ್ಲಿ ಶಾಸಕರನ್ನು ಬಂಧಿಸುವುದು ಅಥವಾ ಬಿಡುಗಡೆ ಮಾಡುವ ಕುರಿತಂತೆ ಸಭಾಧ್ಯಕ್ಷರ ಅನುಮತಿ ಬೇಕಿಲ್ಲ. ಆದರೆ, ಬಂಧನ-ಬಿಡುಗಡೆ ವಿಚಾರದಲ್ಲಿ ಸಂಬಂಧಪಟ್ಟವರು ತಮಗೆ ಮಾಹಿತಿ ನೀಡುತ್ತಾರೆ.ಅದನ್ನು ನಾವು ಸದನದ ಸದಸ್ಯರಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿಗಳಾಗಿರಲಿ, ಶಾಸಕರಾಗಿರಲಿ ಕಾನೂನಿನಡಿ ಎಲ್ಲರೂ ಒಂದೇ ಎಂದ ಅವರು, ಅತೃಪ್ತ ಶಾಸಕರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಎಷ್ಟು ಜನ ಅತೃಪ್ತರಿದ್ದಾರೆ, ಯಾವ ಪಕ್ಷದವರು ಎಂಬುದೂ ತಿಳಿದಿಲ್ಲ. ನಮ್ಮ ಕಚೇರಿಗೆ ಯಾರೂ ಭೇಟಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ವಿದೇಶ ಪ್ರವಾಸಕ್ಕೆ ಹೋಗಿರುವುದಾಗಿ ಊಹಾಪೆÇೀಹಗಳು ಕೇಳಿಬಂದಿವೆ. ಆದರೆ, ನಾನು ನಮ್ಮ ತೋಟದ ಮನೆಯಲ್ಲೇ ಇದ್ದೆ. ವಿದೇಶ ಪ್ರಯಾಣದ ಅಗತ್ಯಬಿದ್ದರೆ ಹೋಗುತ್ತೇನೆ. ಯಾರೂ ನಮ್ಮನ್ನು ಕಳುಹಿಸಬೇಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.