ರೈತರ ಸಾಲಾಮನ್ನಾ ನಿರೀಕ್ಷೆಯನ್ನು ಹುಸಿಗೊಳಿಸಿದ ಕೇಂದ್ರ ಬಜೆಟ್: ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು, ಫೆ.1- ರೈತರ ಸಾಲಮನ್ನಾ ನಿರೀಕ್ಷೆಯನ್ನು ಕೇಂದ್ರ ಬಜೆಟ್ ಹುಸಿಗೊಳಿಸಿದೆ.ರೈತರಿಗೆ ಈ ಬಜೆಟ್‍ನಿಂದ ಏನೇನೂ ಲಾಭವಿಲ್ಲ ಎಂದು ಸಚಿವರಾದ ಎಚ್.ಡಿ.ರೇವಣ್ಣ ಹಾಗೂ ಪುಟ್ಟರಾಜು ಹೇಳಿದ್ದಾರೆ.

ವಿಧಾನ ಸಭಾಧ್ಯಕ್ಷ ರಮೇಶ್‍ಕುಮಾರ್ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ತಿಂಗಳಿಗೆ 2 ಸಾವಿರ ರೂ.ಗಳನ್ನು ರೈತರಿಗೆ ನೀಡಲಾಗುವುದು ಎನ್ನಲಾಗಿದೆ. ಆದರೆ, ದಿನಗೂಲಿ ನೌಕರರಿಗೆ 500ರೂ. ಸಿಗುತ್ತಿದೆ. ರೈತರಿಗೆ ಈ ಯೋಜನೆಯಿಂದ ಯಾವುದೇ ಲಾಭವಿಲ್ಲ ಎಂದರು.
ಗೊಬ್ಬರಕ್ಕೆ ಸಹಾಯಧನವನ್ನು ತೆಗೆದುಹಾಕಲಾಗಿದೆ.ಕೇಂದ್ರದ ಬಜೆಟ್‍ನಲ್ಲಿ ರೈತರ ಸಾಲಮನ್ನಾ ಆಗಲಿದೆ ಎಂಬ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ ಎಂದು ತಿಳಿಸಿದರು.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಸ್ಪರ್ಧೆ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು.

ಚುನಾವಣಾ ಪೂರ್ವ ಮೈತ್ರಿಗೂ ಸಿದ್ಧ, ಮೈತ್ರಿಯಾಗಿದ್ದರೂ ಸಿದ್ಧ.ಮೈತ್ರಿ ಕುರಿತಂತೆ ಪಕ್ಷದ ವರಿಷ್ಠರಾದ ದೇವೇಗೌಡರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‍ನವರು ಈ ಕ್ಷೇತ್ರವನ್ನು ಬಿಟ್ಟುಕೊಟ್ಟರೂ, ಕೊಡದಿದ್ದರೂ ಬೋನಸ್ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ