ಮಂಗಳೂರು-ಬೆಂಗಳೂರು ನಡುವೆ ಆರಂಭವಾಗಲಿರುವ ಮತ್ತೊಂದು ರೈಲು ಸಂಚಾರ

ಹಾಸನ, ಫೆ.1- ಪ್ರಯಾಣಿಕರ ಬಹು ದಿನದ ಬೇಡಿಕೆಯಾದ ಮಂಗಳೂರು -ಬೆಂಗಳೂರು ನಡುವಿನ ಮತ್ತೊಂದು ರೈಲು ಸಂಚಾರ ಶೀಘ್ರದಲ್ಲಿಯೇ ಆರಂಭವಾಗಲಿದೆ.

ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‍ಪ್ರೆಸ್ ರೈಲು ಸಂಚಾರವಾಗುವ ಸುದ್ದಿಯೊಂದು ಹೊರ ಬಿದ್ದಿದ್ದು, ಕೇಂದ್ರ ಇದಕ್ಕೆ ಹಸಿರು ನಿಶಾನೆ ನೀಡಿದೆ.
ನೈಋತ್ಯ ರೈಲ್ವೆ ವಲಯ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಇಲಾಖೆ ಒಪ್ಪಿಗೆ ನೀಡಿದ್ದು, ಇದೀಗ ಓಡಾಟ ಪ್ರಾರಂಭಿಸಲು ಕ್ಷಣಗಣನೆ ಆರಂಭವಾಗಿದೆ.

ಬೆಂಗಳೂರು-ಶ್ರವಣಬೆಳಗೊಳ, ಹಾಸನ-ಮಂಗಳೂರು , ಮಂಗಳೂರು- ಬೆಂಗಳೂರು ನಡುವೆ ಶೀಘ್ರದಲ್ಲಿಯೇ ಮತ್ತೊಂದು ಈ ರೈಲು ಸಂಚಾರ ನಡೆಸಲಿದೆ.
ವಾರದಲ್ಲಿ ಮೂರು ದಿನ ಸಂಚರಿಸುವ ಈ ರೈಲು 22 ಬೋಗಿಗಳನ್ನು ಹೊಂದಿದೆ.

ವೇಳಾಪಟ್ಟಿ: ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಈ ರೈಲು ಹೊರಡಲಿದ್ದು, ನೂತನ ವೇಳಾಪಟ್ಟಿ ಪ್ರಕಾರ, ಮಂಗಳವಾರ, ಶುಕ್ರವಾರ , ಭಾನುವಾರ ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು 8 ಗಂಟೆಗೆ ಹಾಸನಕ್ಕೆ ತಲುಪಲಿದೆ.

ಮುಂಜಾನೆ 4.30ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಮಂಗಳೂರು ರೈಲು ನಿಲ್ದಾಣದಿಂದ ಸೋಮವಾರ, ಬುಧವಾರ, ಶನಿವಾರ ರಾತ್ರಿ 7 ಗಂಟೆಗೆ ಹೊರಡಲಿರುವ ರೈಲು ತಡರಾತ್ರಿ 1.30ಕ್ಕೆ ಹಾಸನ ತಲುಪಲಿದ್ದು , ಮುಂಜಾನೆ 4.30ಕ್ಕೆ ಯಶವಂತಪುರ ಬಂದು ಸೇರಲಿದೆ.

ಮಾರ್ಗದಲ್ಲಿರುವ ನಿಲ್ದಾಣಗಳಾದ ನೆಲಮಂಗಲ, ಕುಣಿಗಲ್, ಯಡಿಯೂರು, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ