ನವದೆಹಲಿ, ಫೆ.1- ಬೇಕಾಬಿಟ್ಟಿ ಸಾಲ ಪಡೆದು ಬ್ಯಾಂಕುಗಳಿಗೆ ವಂಚಿಸಿದ್ದ ದೊಡ್ಡ ದೊಡ್ಡ ಕಾಪೆರ್Çರೇಟ್ ಸಂಸ್ಥೆಗಳಿಂದ ಮೂರು ಲಕ್ಷ ಕೋಟಿ ಸಾಲ ವಸೂಲಿ ಮಾಡಿರುವುದಾಗಿ ಕೇಂದ್ರ ಹಣಕಾಸು ರಾಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವ ಅರುಣ್ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಮಧ್ಯಂತರ ಬಜೆಟ್ ಮಂಡನೆ ಮಾಡಿದ ಅವರು, ಬ್ಯಾಂಕ್ಗೆ ಫೆÇೀನ್ ಮಾಡಿ ಸಾಲ ಪಡೆದುಕೊಳ್ಳುವ ಸುಲಭ ಕ್ರಮದ ಸಂಸ್ಕøತಿಯನ್ನು ಸ್ಥಗಿತಗೊಳಿಸಿರುವುದಾಗಿ ಹೇಳಿದ್ದಾರೆ.
ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಫೆÇೀನ್ ಮೂಲಕವೇ ಸಾಲ ಪಡೆಯುವ ಸಂಸ್ಕøತಿ ಹೆಚ್ಚಾಗಿದ್ದರಿಂದ ಬೇಕಾಬಿಟ್ಟಿ ಸಾಲ ಪಡೆದು ಉದ್ಯಮಿಗಳು ಪರಾರಿಯಾಗಿದ್ದಾರೆ.
ಆದ್ದಾಗ್ಯೂ ನಮ್ಮ ಸರ್ಕಾರ ಸಾಲ ವಸೂಲಿಗೆ ಬಿಗಿಯಾದ ಕ್ರಮ ಕೈಗೊಂಡಿದೆ. ಕೆಟ್ಟ ಸಾಲಗಳನ್ನು ವಸೂಲಿ ಮಾಡಿ ಎಂದು ಆರ್ಬಿಐಗೆ ಹೇಳುವ ದಿಟ್ಟತನವನ್ನು ನಮ್ಮ ಸರ್ಕಾರ ಹೊಂದಿದೆ.
ದೇಶದ ಹಿತದೃಷ್ಟಿಯಿಂದ ಈವರೆಗೂ ಆಗಿರುವ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಕ್ರಮಗಳಿಂದಾಗಿ ದೊಡ್ಡ ದೊಡ್ಡ ಸುಸ್ತಿದಾರ ಉದ್ಯಮಿಗಳು ಕೂಡ ತಮ್ಮ ಸಾಲಗಳ ಬಗ್ಗೆ ಚಿಂತಿತರಾಗುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
59 ನಿಮಿಷದಲ್ಲಿ ಸಾಲ:ಉದ್ಯಮಿಗಳ ಸಾಲ ವಂಚನೆ ಹೊರತಾಗಿಯೂ ಸಣ್ಣ ಮತ್ತು ಮಧ್ಯಮ ಔದ್ಯೋಗಿ ವರ್ಗವನ್ನು ಪೆÇ್ರೀ ಕೇಂದ್ರ ಸರ್ಕಾರ 59 ನಿಮಿಷದಲ್ಲಿ ಸಾಲ ನೀಡುವ ಯೋಜನೆಯನ್ನು ಪರಿಚಯಿಸಿದೆ.
ಸುಲಭವಾಗಿ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಒಂದು ಕೋಟಿಯವರೆಗೂ ಸಾಲವನ್ನು ಒಂದು ಗಂಟೆ ಒಳಗಾಗಿ ಪಡೆಯಲು ಅನುಕೂಲವಾಗುವಂತೆ ನಿಯಮಾವಳಿಗಳನ್ನು ರೂಪಿಸಲಾಗಿದೆ. ಹೀಗಾಗಿ 59 ನಿಮಿಷದೊಳಗೆ ಉದ್ಯಮಿಗಳು ಸಾಲ ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ಮುದ್ರಾ ಯೋಜನೆಯಡಿ 15.56 ಲಕ್ಷ ಮಂದಿಗೆ 7.23 ಲಕ್ಷ ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಶೇ.70ರಷ್ಟು ಮಹಿಳಾ ಉದ್ಯಮಿಗಳು ಫಲಾನುಭವಿಗಳಾಗಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.