ಲಖನೌ: ಮಹಾಕಾವ್ಯ ರಾಮಾಯಣದಲ್ಲಿ ರಾವಣನೇ ಖಳನಾಯಕ. ಈಗ ಪ್ರಜಾಪ್ರಭುತ್ವ ಹೋರಾಟದಲ್ಲಿ ರಾಹುಲ್ ಗಾಂಧಿ ರಾವಣನಿದ್ದಂತೆ ಎಂದು ಉತ್ತರಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ರಾವಣನಂತಿರುವ ರಾಹುಲ್ ಗಾಂಧಿಯವರು ತಮ್ಮ ಸಹೋದರಿ ಶೂರ್ಪನಖಿಯಂತಿರುವ ಪ್ರಿಯಾಂಕಾ ಗಾಂಧಿಯವರನ್ನು ರಾಜಕೀಯಕ್ಕೆ ಇಳಿಸಿದ್ದಾರೆ ಎಂದು ಸಿಂಗ್ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿಯವರನ್ನು ರಾವಣ ಹಾಗೂ ಪ್ರಿಯಾಂಕಾ ಗಾಂಧಿಯವರನ್ನು ಶೂರ್ಪನಖಿಗೆ ಹೋಲಿಸಿರುವ ಸುರೇಂದ್ರ ಸಿಂಗ್, ಪ್ರಧಾನಿ ಮೋದಿಯವರನ್ನು ರಾಮನಂತೆ ಎಂದು ಹೇಳಿದ್ದಾರೆ.
Priyanka Gandhi is Surpanakha to Rahul Gandhi’s Raavan: BJP