ಸಂಗಮದಲ್ಲಿ ಯೋಗಿ ಸಂಪುಟದಿಂದ ಪುಣ್ಯಸ್ನಾನ: ತರೂರ್ ಟ್ವಿಟ್ ಗೆ ಬಿಜೆಪಿ ತಿರುಗೇಟು

ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಸ್ಂಪುಟ ಸಚಿವರು ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾಡಿರುವ ಟ್ವೀಟ್ ತೀವ್ರ ಚರ್ಚೆಗೆ ಕಾರಣವಾಗಿದ್ದು, ತರೂರ್ ಟ್ವೀಟ್ ಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ತರೂರ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಚಿವ ಸಿದ್ದಾರ್ಥನಾಥ್ ಕುಂಭ ಮೇಳದ ಮಹತ್ವ ಅವರಿಗೆ ಹೇಗೆ ತಾನೇ ಅರಿವಾಗಲು ಸಾಧ್ಯ? ಅವರು ಬೆಳೆದು ಬಂದಿರುವ ವಾತಾವರಣ, ಪಡೆದ ಸಂಸ್ಕಾರವೇ ಅಂತಹದ್ದು, ಇದೆಲ್ಲ ಅವರಿಗೆ ಅರ್ಥವಾಗುವ ಸಂಗತಿಯಲ್ಲ. ನೀವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೀರಿ. ಈ ಪವಿತ್ರ ಸಂಗಮದಲ್ಲಿ ಒಂದು ಬಾರಿ ಮುಳುಗೆದ್ದು ನಿಮ್ಮ ಪಾಪದ ಪ್ರಾಯಶ್ಚಿತ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಪ್ರಯಾಗ್‌ರಾಜ್‌ ನಲ್ಲಿ ನಿನ್ನೆ ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿ 36,000 ಕೋಟಿ ರೂ ವೆಚ್ಚದ ವಿಶ್ವದ ಅತೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಯೋಜನೆಯನ್ನು ಪ್ರಕಟಿಸಿದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಅವರ ಸಂಗಡಿಗರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಕುಂಭ ಪುಣ್ಯ ಸ್ನಾನ ಮಾಡಿದ್ದರು.

ಈ ಫೋಟೋಗೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ “ಇಸ್‌ ಸಂಗಮ್‌ ಮೇ ಸಬ್‌ ನಂಗೇ ಹೇಂ (ಈ ಸಂಗಮದಲ್ಲಿ ಎಲ್ಲರೂ ನಗ್ನರು) ಎಂದು ಕ್ಯಾಪ್ಶನ್‌ ಬರೆದು ಟ್ವೀಟ್ ಮಾಡಿದ್ದರು. ಅಲ್ಲದೇ ‘ಗಂಗೆಯನ್ನು ಶುದ್ಧೀಕರಿಸಬೇಕಿರುವಲ್ಲಿ ಎಲ್ಲರೂ ಅಲ್ಲೇ ತಮ್ಮ ಪಾಪವನ್ನು ತೊಳೆಯುತ್ತಿದ್ದಾರೆ’ ಎಂಬ ಬರಹವನ್ನು ತರೂರ್‌ ಬರೆದಿದ್ದರು.

On Yogi Adityanath’s Kumbh Dip, Shashi Tharoor’s Dig

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ