ಮತ್ತೆ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

ಮುಂಬೈ: ಲೋಕಪಾಲ್ ಹಾಗೂ ಲೋಕಾಯುಕ್ತಕ್ಕಾಗಿ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ತಮ್ಮ ಸ್ವಗ್ರಾಮವಾದ ಮಹರಾಷ್ಟ್ರದ ರಾಲೆಗಾಂವ್​ ಸಿದ್ದಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅಣ್ಣಾ ಹಜಾರೆ, ಭ್ಹ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಸ್ಥಾಪನೆಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಗುಡುಗಿದ್ದಾರೆ. ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ ಹಾಗೂ ಕೇಂದ್ರ ಮಟ್ಟದಲ್ಲಿ ಲೋಕಪಾಲ್​ ಅನ್ನು ಪ್ರಾರಂಭಿಸುವಂತೆ ಬೇಡಿಕೆಯಿಟ್ಟಿದ್ದಾರೆ.

ಪ್ರಧಾನಿ ವಿರುದ್ಧ ಸಾಕ್ಷಿ ಸಮೇತ ದೂರು ನೀಡಿದರೆ ಲೊಕಪಾಲ್​ ಅಡಿಯಲ್ಲಿ ಅವರ ವಿರುದ್ಧವೂ ತನಿಖೆ ನಡೆಸಬಹುದಾಗಿದೆ. ಇದಕ್ಕೆ ಪ್ರತಿರೂಪವಾಗಿರುವ ಲೋಕಾಯುಕ್ತದ ಅಡಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿ ಎಲ್ಲ ಮಂತ್ರಿಗಳ ವಿರುದ್ಧ ಸಾಕ್ಷಿ ಸಮೇತ ಯಾವುದೇ ದೂರು ದಾಖಲಾದರೂ ತನಿಖೆ ನಡೆಸಬಹುದಾಗಿದೆ. ಇದೇ ಕಾರಣದಿಂದಾಗಿ ಇದನ್ನು ನಿರಾಕರಿಸುತ್ತಿದ್ದಾರೆ. ಅಲ್ಲದೇ ಯಾವುದೇ ಪಕ್ಷಕ್ಕೂ ಲೋಕಾಯುಕ್ತ, ಲೋಕಪಾಲ ಬೇಕಾಗಿಲ್ಲ. 2013ರಲ್ಲೇ ಸಂಸತ್ತಿನಲ್ಲಿ ಲೋಕಪಾಲ್​ ಬಿಲ್​ ಪಾಸಾಗಿದೆ. ಆದರೆ, ಇದುವರೆಗೂ ಯಾರನ್ನೂ ನೇಮಕ ಮಾಡಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮೊಂದಿಗೆ ಯಾವೊಬ್ಬ ರಾಜಕಾರಣಿಯು ಕುಳಿತು ಹೋರಾಟ ನಡೆಸುವುದು ಬೇಡ. ನಾನು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಪ್ರತಿಭಟನೆ ಕುಳಿತಿಲ್ಲ. ಬದಲಾಗಿ ದೇಶದ ಒಳಿತಿಗಾಗಿ ಸತ್ಯಾಗ್ರಹ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

Anna Hazare To Launch Hunger Strike On Lokpal From Today

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ