ಪಾಕಿಸ್ತಾನದ ಮೊದಲ ಹಿಂದೂ ಮಹಿಳಾ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕರಿಸಿದ ಸುಮನ್ ಕುಮಾರಿ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದು, ಸುಮನ್ ಕುಮಾರಿ ಪಾಕಿಸ್ತಾನದ ಮೊದಲ ಹಿಂದೂ ಮಹಿಳಾ ನ್ಯಾಯಾಧೀಶೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಖಂಬರ್-ಶಹದಾದ್ಕೋಟ್ ಜಿಲ್ಲೆಯ ಮೂಲದವರಾಗಿರುವ ಸುಮನ್ ಕುಮಾರಿ ಅದೇ ಜಿಲ್ಲೆಯಲ್ಲಿ ಸಿವಿಲ್ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲಿದ್ದಾರೆ. ಹೈದರಾಬಾದ್ ನಲ್ಲಿ ಎಲ್ಎಲ್ ಬಿ ಪೂರ್ಣಗೊಳಿಸಿರುವ ಸುಮನ್ ಕುಮಾರಿ, ಕರಾಚಿಯ ಸ್ಜಬಿಸ್ಟ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುಮನ್ ತಂದೆ ಪವನ್ ಕುಮಾರ್ ಬೊಡನ್, ತಮ್ಮ ಮಗಳು ಜಿಲ್ಲೆಯಲ್ಲಿರುವ ಬಡವರಿಗೆ ಉಚಿತ ಕಾನೂನು ನೆರವು ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.

ಸುಮನ್ ಅತ್ಯಂತ ಸವಾಲಿನ ವೃತ್ತಿಯನ್ನು ಕೈಗೆತ್ತಿಕೊಂಡಿದ್ದಾರೆ. ಕಠಿಣ ಪರಿಶ್ರಮ ಹಾಗೂ ಪ್ರಮಾಣಿಕತೆಯಿಂದ ಉನ್ನತ ಮಟ್ಟಕ್ಕೇರುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ಪವನ್ ಕುಮಾರ್.

Suman Kumari becomes Pakistan’s first Hindu woman judge

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ