ಜ.31ರಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 7ನೇ ದೀಕ್ಷಾಂತ ಘಟಿಕೋತ್ಸವ ಸಮಾರಂಭ

ಬೆಂಗಳೂರು, ಜ.29- ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದ ಏಳನೇ ದೀಕ್ಷಾಂತ ಘಟಿಕೋತ್ಸವ ಸಮಾರಂಭ ಜ.31ರಂದು ಬೆಳಗ್ಗೆ 11 ಗಂಟೆಗೆ ನಗರದ ರವೀಂದ್ರಕಲಾ ಕ್ಷೇತ್ರದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಕøತ ವಿವಿ ಕುಲಪತಿ ಪ್ರೊ.ಪದ್ಮಶೇಖರ್ ಮಾತನಾಡಿ, ಈ ಬಾರಿಯ ಘಟಿಕೋತ್ಸವದಲ್ಲಿ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ತಪೋಕ್ಷೇತ್ರ ಕಣ್ಣಕುಪ್ಪೆ ಗವಿಮಠಾಧ್ಯಕ್ಷರು ಹಾಗೂ ಸಂಸ್ಕøತ ವಿದ್ವಾನರೂ ಆದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರಿಗೆ ಡಿಲಿಟ್ ಪದವಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

2017-18ನೇ ಸಾಲಿನ ಬಿಎ (ಶಾಸ್ತ್ರಿ)-118 ವಿದ್ಯಾರ್ಥಿಗಳು ಎಂಎ (ಆಚಾರ್ಯ)-222, ಎಂಫಿಲ್-10 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ನೀಡಲಾಗುವುದು. ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಗುವುದು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸ್ವರ್ಣ ಪದಕ ಪ್ರದಾನ ಮಾಡುವರು. ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಹಲವು ಗಣ್ಯವ್ಯಕ್ತಿಗಳು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದರು.

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮುರ್ತಿಯವರು ಸ್ಥಾಪಿಸಿರುವ ದತ್ತಿನಿಧಿ ನಗದು ಬಹುಮಾನವನ್ನು ಅತಿ ಹೆಚ್ಚು ಅಂಕ ಪಡೆದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ ಎಂದು ಇದೇ ವೇಳೆ ಪದ್ಮಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ.ವಿ.ಗಿರೀಶ್‍ಚಂದ್ರ, ವಿದ್ವಾನ್ ಪಿ.ಆರ್.ಪಾಗೋಜಿ, ಡಾ.ಸಂತೋಷ್ ಹಾನಗಲ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ