ಫ.1ರಿಂದ 10ರವರೆಗೆ ಅಂತಾರಾಷ್ಟ್ರೀಯ ಮಧ್ಯಂತರ ಉತ್ಸವ

Varta Mitra News

ಬೆಂಗಳೂರು, ಜ.28-ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್‍ಮೆಂಟ್ ಆಟ್ರ್ಸ್ ವತಿಯಿಂದ ಅಂತಾರಾಷ್ಟ್ರೀಯ ಮಧ್ಯಂತರ ಉತ್ಸವ ಫೆ.1 ರಿಂದ 10 ರವರೆಗೆ ಜೆ.ಪಿ.ನಗರದ ರಂಗಶಂಕರದಲ್ಲಿ ನಡೆಯಲಿದೆ ಎಂದು ಸೆಂಟರ್‍ನ ಜಯಚಂದ್ರನ್ ಪಾಲಾಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಅಟ್ಟಕ್ಕಲರಿ ಮಧ್ಯಾವಧಿ ಉತ್ಸವ ಬಹುಸಂಖ್ಯೆಯ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಹಭಾಗಿತ್ವದ ಯೋಜನೆಗಳಿಗೆ ಸಾಕ್ಷಿಯಾಗಲಿದೆ.ಭಾರತದಲ್ಲಿ ಸಮಕಾಲೀನ ನೃತ್ಯ ಸಮುದಾಯವು ಸ್ಥಿರವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಉತ್ಸವ ಯೋಚನೆಗಳನ್ನು ಪ್ರಚೋದಿಸುವ ಹೊಸ ಕೃತಿಗಳನ್ನು ರೂಪಿಸುವ ಅಂತರಾಷ್ಟ್ರೀಯ ಸಹಯೋಗಗಳನ್ನು ಬಲಪಡಿಸುವಲ್ಲಿ ಗಮನವನ್ನು ಕೇಂದ್ರಿಕರಿಸುತ್ತದೆ ಎಂದರು.
ಉತ್ಸವವು ಮುಕ್ತ ಸ್ಟುಡಿಯೋ ಪ್ರಸ್ತುತಿಗಳು ಅಂತರಾಷ್ಟ್ರೀಯ ನೃತ್ಯ ಸಂಯೋಜಕರು ಮತ್ತು ಶಿಕ್ಷಕರಿಂದ ಕಾರ್ಯಾಗಾರಗಳು ಮತ್ತು ಮಾಸ್ಟರ್ ಕ್ಲಾಸ್‍ಗಳನ್ನು ಹೊಂದಿರುತ್ತದೆ.
ಉತ್ಸವದಲ್ಲಿ ಸಾರ್ವಜನಿಕರು ಭಾಗವಹಿಸಬಹುದ್ದಾಗಿದ್ದು ಪ್ರದರ್ಶನಗಳ ಅಧ್ಬುತ ಸರಣಿಗಳು ವೀಕ್ಷಕರಿಗೆ ಒಂದೊಂದು ಸಂದೇಶ ನೀಡಲಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ 9845946003 ಗೆ ಸಂಪರ್ಕಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ