ಕೇಂದ್ರದ ವಿರುದ್ಧ ಜ.31ರಂದು ರಾಜ್ಯ ಕಟ್ಟಡ ನೌಕರರ ಸಂಘದ ಮೂಷ್ಕರ

ಬೆಂಗಳೂರು, ಜ.28-ಕೇಂದ್ರ ಸರ್ಕಾರವು ತರಲು ಹೊರಟಿರುವ ಸಾಮಾಜಿಕ ಭದ್ರತೆ ಕಲ್ಯಾಣ ಸಂಕೇತ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಸಂಕೇತಗಳಲ್ಲಿ ವಿಲೀನ ಗೊಳಿಸುತ್ತಿರುವುದನ್ನು ವಿರೋಧಿಸಿ ಕಟ್ಟಡ ಕಾರ್ಮಿಕ ಕಾಯಿದೆಗಳನ್ನು ಉಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ನೌಕರರ ಕೇಂದ್ರ ಒಕ್ಕೂಟ ಜ.31 ರಂದು ಧರಣಿ ಮುಷ್ಕರವನ್ನು ಟೌನ್‍ಹಾಲï ಮುಂದೆ ಹಮ್ಮಿಕೊಂಡಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎನ್.ಪಿ.ಸ್ವಾಮಿ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಸರಳೀಕರಿಸುವ ಉದ್ದೇಶದಿಂದ ದೇಶದಲ್ಲಿರುವ ಹಲವಾರು ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಕೇತಗಳಾಗಿ ವಿಂಗಡಿಸುತ್ತಿದೆ. ಅವುಗಳೆಂದರೆ ಕಾರ್ಮಿಕ ವೇತನ ಸಂಕೇತ ಕಾರ್ಮಿಕ ಔದ್ಯೋಗಿಕ ಸಂಬಂಧಗಳ ಸಂಕೇತ ಸಾಮಾಜಿಕ ಭದ್ರತಾ ಹಾಗೂ ಕಲ್ಯಾಣ ಸಂಕೇತ ಮತ್ತು ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷಿತ ಕೆಲಸದ ನಿಯಮಗಳ ಸಂಕೇತ ಇವುಗಳಿಂದ ಒಟ್ಟು 45 ಕಾರ್ಮಿಕ ಶಾಸನಗಳು ರದ್ದಾಗುವ ಸಾಧ್ಯತೆಯಿದೆ ಎಂದರು.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕಟ್ಟಡ ಕಾರ್ಮಿಕರ ಕಾಯಿದೆಗಳು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳು ರದ್ದಾದ ಪಕ್ಷದಲ್ಲಿ ರಾಜ್ಯದ 13 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಒಟ್ಟು ದೇಶದಲ್ಲಿಯ ಒಟ್ಟು 2.5 ಕೋಟಿ ಕಾರ್ಮಿಕರು ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಆರೋಪಿಸಿದರು.

ಆದ್ದರಿಂದ ಕೇಂದ್ರ ಸರ್ಕಾರ ಸಂಕೇತ ವಿಲೀನಗಳಿಸುತ್ತಿರುವುದನ್ನು ವಿರೋಧಿಸಿ ಕಲ್ಯಾಣ ಮಂಡಳಿಯನ್ನು ಉಳಿಸಿ ಮಂಡಳಿಯನ್ನು ಉತ್ತಮಪಡಿಸುವಂತೆ ಒತಾಯಿಸಿ ಜ.31 ರಂದು ಟೌನ್‍ಹಾಲ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದು ಫೆ.7 ರಂದು ನ್ಯಾಷನಲ ಕ್ಯಾಂಪೆನ್ ಕಮಿಟಿ ಆನ್ ಸೆಂಟ್ರಲ ಲೇಷಿಸ್‍ಲೇಷನ್ ಫಾರ್ ಕನ್ಸ್‍ಟ್ರಕ್ಷನ್ ಲೇಬರ್ ನೇತೃತ್ವದಲ್ಲಿ ನವದೆಹಲಿಯ ಪಾರ್ಲಿಮೆಂಟ ಮುಂಭಾಗ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ