ನವದೆಹಲಿ: 2019 ರ ಲೋಕಸಭೆ ಚುನಾವಣೆಗಾಗಿ ಉತ್ತರ ಪ್ರದೇಶದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸಿದ ಬಳಿಕ ಕಾಂಗ್ರೆಸ್ ಪಕ್ಷ ಮತ್ತೊಂದು ಯೋಜನೆಯನ್ನು ಸಿದ್ಧಪಡಿಸಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಫೆಬ್ರವರಿ ಎರಡನೇ ವಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ‘ಕುಂಭ ಮೇಳ’ದಲ್ಲಿ ಭಾಗಿಯಾಗಲಿದ್ದಾರೆ. ಆ ವೇಳೆ ಮೊದಲ ಬಾರಿಗೆ ಜನವಾರ ಧರಿಸಿದ(ಜನವಾರಧಾರಿ) ರಾಹುಲ್ ಗಾಂಧಿಯವರನ್ನು ನೋಡಲಾಗುವುದು ಎಂದು ಹೇಳಲಾಗಿದೆ. ಈ ಸಮಯದಲ್ಲಿ ರಾಹುಲ್ ತೆಳುವಾದ ಹಳದಿ ದೋತಿ ಮತ್ತು ಪಂಚೆ ಧರಿಸಿ, ಹನ್ನೆರಡು ಬ್ರಾಹ್ಮಣರ ಮಂತ್ರ ಘೋಷದೊಂದಿಗೆ ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 24% ನಷ್ಟು ಮೇಲ್ವರ್ಗದವರ ಮತಬ್ಯಾಂಕ್ ಸೆಳೆಯಲು ಮುಂದಾಗಿದೆ ಎಂದು ಹೇಳಲಾಗಿದೆ. ಅದಕ್ಕಾಗಿಯೇ ರಾಹುಲ್ ಗಾಂಧಿ ಕುಂಭ ಮೇಳದಲ್ಲಿ ಪಾಲ್ಗೊಳ್ಳುವುದರೊಂದಿಗೆ ಪಕ್ಷವು ಹಿಂದೂ-ವಿರೋಧಿ ಪಟ್ಟವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಟೆಂಪಲ್ ರನ್ ಮಾಡಿದ್ದ ರಾಹುಲ್ ಗಾಂಧಿ ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ರಿಜಿಸ್ಟರ್ ನಲ್ಲಿ ತಾನು ಹಿಂದೂ ಎಂದು ನೋಂದಾಯಿಸಿದ್ದರು. ಬಳಿಕ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಜನವಾರಧಾರಿ ಬ್ರಾಹ್ಮಣ ಎಂದಿದ್ದರು.
ಏತನ್ಮಧ್ಯೆ, ರಾಹುಲ್ ಗಾಂಧಿಯವರ ಜನವಾರ ಧರಿಸಿರುವ ಛಾಯಾಚಿತ್ರಗಳನ್ನು ಸುರ್ಜೆವಾಲಾ ಬಿಡುಗಡೆ ಮಾಡಿದ್ದರು. ರಾಜಸ್ಥಾನ ವಿಧಾನಸಭಾ ಚುನಾವಣೆ ವೇಳೆ ಪುಷ್ಕರ್ ಬ್ರಹ್ಮ ಜೀ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರಾಹುಲ್ ತಮ್ಮನ್ನು ಕೌಲ್ ಬ್ರಾಹ್ಮಣನೆಂದು ಬಣ್ಣಿಸಿದ್ದರು. ಅವರದು ದತ್ತಾತ್ರೇಯ ಗೋತ್ರ ಎಂದು ಹೇಳಿದ್ದರು. ಇದಲ್ಲದೆ ಕರ್ನಾಟಕ ಚುನಾವಣೆ ವೇಳೆ ಸಹ ರಾಹುಲ್ ಹಲವು ದೇವಾಲಯಕ್ಕೆ ಭೇಟಿ ನೀಡಿದ್ದರು.
ರಾಹುಲ್ ಗಾಂಧಿಯವರ ಹಿಂದೂ ಕಾರ್ಡ್ ಹೊರತುಪಡಿಸಿ, ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯವರ ಚುನಾವಣಾ ಪ್ರಚಾರವೂ ಕೇಂದ್ರೀಕೃತವಾಗಿದೆ. ಫೆಬ್ರವರಿ ತಿಂಗಳಲ್ಲಿ ರಾಹುಲ್ ಗಾಂಧಿ 12 ರ‍್ಯಾಲಿ ನಡೆಸಲಿದ್ದಾರೆ. ಇವುಗಳಲ್ಲಿ ಹೆಚ್ಚಿನ ರ‍್ಯಾಲಿಯಲ್ಲಿ ರಾಹುಲ್ ಪ್ರಿಯಾಂಕಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಗಮನ ಲಖನೌದಲ್ಲಿದೆ. 2014 ರ ಮೊದಲು ಪ್ರಧಾನಿ ಮೋದಿ ಅಮಿತ್ ಷಾ ಅವರಿಗೆ ಉತ್ತರಪ್ರದೇಶದ ಜವಾಬ್ದಾರಿ ವಹಿಸಿದ್ದರು ಎಂದು ಹೇಳಲಾಗಿದೆ. ಈ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೂಡ ಪ್ರಿಯಾಂಕಾ ಅವರಿಗೆ ಜವಾಬ್ದಾರಿ ನೀಡಿದ್ದಾರೆ.