ಬಾಗಲಕೋಟ ವಾಷರ್‍ಮನ್ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ

ಬಾಗಲಕೋಟ: ನೂತನವಾಗಿ ಬಾಗಲಕೋಟ ವಾಷರ್‍ಮನ್ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ ಎಚ್. ಮಡಿವಾಳರ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಸುರೇಶ ಮಡಿವಾಳರ ಇವರುಗಳಿಗೆ ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತೀ ಸಣ್ಣ ಸಮುದಾಯಗಳ ಒಕ್ಕೂಟ (ರಿ) ಜಿಲ್ಲಾ ಘಟಕ ಬಾಗಲಕೋಟ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಜಗನ್ನಾಥ ಮಹಾಸ್ವಾಮಿಗಳು ಮಹಾಪುರುಷ ಸುಕ್ಷೇತ್ರ ಮುರನಾಳ ಮಠ ಇವರು ವಹಿಸಿದ್ದರು.

ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಅಮರೇಶ ಕೊಳ್ಳಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯರುಗಳಾದ ವಿ. ವಿ. ಶಿರಗಣ್ಣವರ, ಶ್ರೀಮತಿ ನಾಗರತ್ನಾ ಹೆಬ್ಬಳ್ಳಿ, ಪ್ರಕಾಶ ಹಂಡಿ ಹಾಗೂ ಸಾಮಾಜಿಕ ಹೋರಾಟಗಾರರಾದ ಡಾ. ಅಶೋಕ ಜಾಲವಾದಿಯವರು ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷರಾದ ಬನಪ್ಪ ಮಡಿವಾಳರ, ರವಿ ಬಡಿಗೇರ, ಪ್ರಕಾಶ ಮಡಿವಾಳರ ಗುರಪ್ಪ ಮಡಿವಾಳರ ಬಸವರಾಜ ಡೊಮನಾಳ, ಹನಮಂತ ಹಡಪದ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಸುರೇಶ ಹಡಪದ ನಿರೂಪಿಸಿ, ವಂದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ