ಬೆಂಗಳೂರು, ಜ.25-ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಇಂದಿನಿಂದ ಫೆಬ್ರವರಿ 3 ರವರೆಗೆ ದೇಶದ ವಿವಿಧ ಭಾಗಗಳ ಕರಕುಶಲಕಾರರಿಂದ ಆರ್ಟಿಸನ್ಸ್ ಬಜಾರ್ ಆಯೋಜಿಸಲಾಗಿದೆ.
ದೇಶದ ಮೂಲೆ ಮೂಲೆಗಳಲ್ಲಿರುವ ಕರಕುಶಲ ಕಲಾವಿದರನ್ನು ಒಂದೇ ವೇದಿಕೆಯಡಿ ತರುವ ಉದ್ದೇಶದಿಂದ, ಗ್ರಾಂಡ್ ಫ್ಲಿಯಾ ಮಾರ್ಕೆಟ್, ಚಿತ್ತಾರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮಾರಾಟ ಮೇಳದಲ್ಲಿ 100 ಮಳಿಗೆಗಳು ಇವೆ.
ಒರಿಸ್ಸಾ, ರಾಜಸ್ತಾನ್ ಟ್ರೈಬಲ್ನ ಪಾರಂಪರಿಕ ಆಭರಣಗಳು. ವಿವಿಧ ಮರಗಳಿಂದ ತಯಾರಿಸಿದ ಫೌಂಟೇನ್, ವಾಚಗಳು, ಡ್ರೈಫೂಟ್ ಬಾಕ್ಸ್ಗಳು, ಪಿಂಗಾಣಿ ವಸ್ತುಗಳು, ಸೀರೆಗಳು, ಕುರ್ತಿಗಳು. ಕಲಾಂಕರಿ, ಕೊಲ್ಕೊತ್ತಾ ಬ್ಯಾಗ್ಗಳು, ಕನ್ನೂರ್ ಕಾಟನ್ ಕರ್ಟನ್ಗಳು, ಬೆಡ್ ಶೀಟ್ಗಳು ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಿವೆ.
ಆಂಧ್ರಪ್ರದೇಶದ ಹುಲ್ಲಿನ ಪಪೆಟ್ಗಳು, ಹಾಸು, ಬೆಳ್ಳಿಯ ಸೂಕ್ಷ್ಮ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಕಚೇರಿಗೆ ಉಪಯುಕ್ತ ಸಾಮಾಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ.
ಪ್ರವೇಶ ಉಚಿತವಿದ್ದು, ಪ್ರತಿದಿನ ಬೆಳಗ್ಗೆ 11ರಿಂದ ಸಂಜೆ 8ರವರೆಗೆ ಪ್ರದರ್ಶನ ನಡೆಯಲಿದೆ.