ಜ.27ರಂದು ದತ್ತಿ ಉಪನ್ಯಾಸ ಕನ್ನಡ ಸೇವಾ ರತ್ನ ಪ್ರಶಸ್ತಿ ಸಮಾರಂಭ

ಬೆಂಗಳೂರು, ಜ.25-ಡಾ.ಎಸ್.ಜಿ.ಮಾಲತಿಶೆಟ್ಟಿಯವರ ಕೃತಿ ಶರಣ ಭಾವದೀಪಿಕ ವಚನ ಗಾನ ಮಾಲಿಕೆ ಲೋಕಾರ್ಪಣೆ ಮತ್ತು ದತ್ತಿ ಉಪನ್ಯಾಸ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಇದೇ 27 ರಂದು ಚಾಮರಾಜಪೇಟೆಯ ಕುವೆಂಪು ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಆಯೋಜಿಸಲಾಗಿದೆ.

ಬೆಂಗಳೂರು ನಗರ ಜಿಲ್ಲಾ ಕಸಾಪ ಹಾಗೂ ಅನಿಕೇತನ ಕನ್ನಡದಳ ಮತ್ತು ಪರಸ್ಪರ ಸ್ನೇಹ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೂ ಮುನ್ನ ಗೀತಗಾಯನ ಮತ್ತು ಕವಿಗೋಷ್ಠಿ ಮುಕ್ತ ಅವಕಾಶ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್‍ನ ಗೌರವಾಧ್ಯಕ್ಷ ಎಂ.ತಿಮ್ಮಯ್ಯ ವಹಿಸಲಿದ್ದಾರೆ.ಖ್ಯಾತ ಲೇಖಕ ರಮೇಶ್ ಚಂದ್ರ ಕೃತಿ ಲೋಕಾರ್ಪಣೆ ಮಾಡಲಿದ್ದು, ಅನಿಕೇತನ ಕನ್ನಡ ದಳ ಹಾಗೂ ಪರಿಷತ್‍ನ ಅಧ್ಯಕ್ಷ ಮಾಯಣ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ವಿಶ್ರಾಂತ ಪ್ರಾಂಶುಪಾಲ ಎಂ.ಬಿ.ಶಿವಾನಂದ ಕೃತಿ ಪರಿಚಯ ಮಾಡಿಕೊಡಲಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ರಮೇಶ್‍ಚಂದ್ರ, ಶೈಕ್ಷಣಿಕ ಕ್ಷೇತ್ರದಲ್ಲಿ ಎಂ.ಬಿ.ಶಿವಾನಂದ, ಟಿ.ವಿ.ನಾಗರಾಜ, ಸಮಾಜ ಸೇವಾ ಕ್ಷೇತ್ರದಲ್ಲಿ ಲಕ್ಷ್ಮೀನಾರಾಯಣ, ಚಿತ್ರಕಲಾ ಕ್ಷೇತ್ರ ಮರಿಯಪ್ಪ ಗುಳ್ಳೆಜ್ಜಿ, ಉದ್ಯಮ ಕ್ಷೇತ್ರದ ರಾಮಚಂದ್ರ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ