
ಹಝಿರಾ: ಸ್ವಯಂಚಾಲಿತ ಫಿರಂಗಿಗಳನ್ನು ಹೊಂದಿರುವ ಕೆ-9 ವಜ್ರ ಟ್ಯಾಂಕರ್ ನಲ್ಲಿ ಒಂದು ಸುತ್ತು ಪ್ರಯಾಣಿಸುವ ಮೂಲಕ ಪ್ರಧಾನಿ ಮೋದಿ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದ ಯಶಸ್ಸನ್ನು ಪ್ರದರ್ಶಿಸಿದರು.
ಗುಜರಾತಿನ ಹಝಿರಾದಲ್ಲಿ ಎಲ್ & ಟಿ ಕಂಪೆನಿ ನಿರ್ಮಿಸಿದ ಕೆ-9 ವಜ್ರ ಟ್ಯಾಂಕರ್ ಅನ್ನು ಪರಿಶೀಲಿಸಿ ಅದರಲ್ಲಿ ಸವಾರಿ ಮಾಡಿದ ಬಳಿಕ ಪ್ರಧಾನಿ ಮೋದಿ 10 ಸೆಕೆಂಡ್ ಗಳ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.
ಭಾರತೀಯ ಸೇನೆ ಸುಮಾರು 30 ವರ್ಷಗಳ ನಂತರ ಇತ್ತೀಚಿಗಷ್ಟೇ ಕೆ-9 ವಜ್ರ ಸೇರಿದಂತೆ ಎರಡು ಫಿರಂಗಿಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಂಡಿದ್ದು, ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲಿವೆ.