ಇಂದಿನಿಂದ ಅಂತಾರಾಷ್ಟ್ರೀಯ ವ್ಯವಹಾರ ಸಮ್ಮೇಳನ

ಬೆಂಗಳೂರು, ಜ.18- ವ್ಯಾಪಾರ ಮತ್ತು ಟೆಕ್ನಾಲಜಿಯನ್ನು ಪ್ರಮುಖವಾಗಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 300 ಬಿಲಿಯನ್ ಡಾಲರ್ಸ್‍ನಿಂದ 350 ಬಿಲಿಯನ್ ಡಾಲರ್ಸ್‍ಗೆ ಹೆಚ್ಚಿಸಲು ಎಫ್‍ಐಇಒ ಗುರಿ ಹೊಂದಿದೆ ಎಂದು ಎಫ್‍ಐಇಒ ದಕ್ಷಿಣ ವಲಯ ಅಧ್ಯಕ್ಷ ಇಸ್ರಾರ್ ಅಹಮ್ಮದ್ ತಿಳಿಸಿದರು.
ನಗರದ ಯಶವಂತಪುರದ ತಾಜ್ ಹೊಟೇಲ್‍ನಲ್ಲಿ ಬೆಂಗಳೂರು ಕನೆP್ಟï ಮಿತ್ರ, ಬಿಸಿನೆಸ್ ಯೋಗಿ ಹಾಗೂ ಎಂಎಸ್ ಎಂಇ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವ್ಯವಹಾರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕರ್ನಾಟಕದ ರಫ್ತು ವ್ಯವಹಾರ 18 ಶತಕೋಟಿ ಡಾಲರ್‍ಗಳಷ್ಟಿದ್ದು, ಇದು ದೇಶದ ಒಟ್ಟಾರೆ ರಫ್ತಿನಲ್ಲಿ ಶೇ.7ರಷ್ಟಾಗಿದೆ. ಭಾರತ ಈಗ ಚರ್ಮದ ರಫ್ತಿನಲ್ಲಿ ವಿಶ್ವದ ನಾಯಕನೆನಿಸಿದೆ.ವಾಸ್ತವವಾಗಿ ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರದ ಒತ್ತಡ ಭಾರತಕ್ಕೆ ಲಾಭದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಗ್ರಾಹಕರೊಂದಿಗೆ ಆಮದು, ರಫ್ತು ಚಟುವಟಿಕೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ನಡೆಸಲು ಬಯಸುವ ಸಂಸ್ಥೆಗಳು, ಹೂಡಿಕೆದಾರರು, ರಫ್ತುದಾರರು ಹಾಗೂ ಉದ್ಯಮಿಗಳ ಅನುಕೂಲಕ್ಕಾಗಿ ಈ ಸಮ್ಮೇಳನ ಆಯೋಜಿಸಲಾಗಿತ್ತು.
ಬೆಂಗಳೂರು ಕನೆP್ಟï ಮಿತ್ರ ಸಿಇಒ ಸತೀಶ್ ಕೋಟಾ, ಐಎಎಸ್ ಅಧಿಕಾರಿ ಅಮರ್‍ನಾಥ್ ಮೊದಲಾದವರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ