ಕನ್ನಡ ಸಾಹಿತ್ಯ ಪರಿಷತ್ನಿಂದ ನಾಳೆ ಯೋಧನಮನ ಕಾರ್ಯಕ್ರಮ

Varta Mitra News

ಬೆಂಗಳೂರು, ಜ.17- ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾಧನಕೇರಿ ಸಾಹಿತ್ಯ ಸಂಸ್ಕøತಿ ಪ್ರತಿಷ್ಠಾನ ನಾಳೆ ಯೋಧನಮನ ಕಾರ್ಯಕ್ರಮವನ್ನು ಜಯನಗರದ ನ್ಯಾಷನಲ್ ಕಾಲೇಜಿನ ಎಚ್‍ಎನ್ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್ ಅಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಐವರು ಯೋಧರ ಪ್ರತಿ ಕುಟುಂಬಕ್ಕೆ 50 ಸಾವಿರ ರೂ.ನೆರವು ನೀಡಲಾಗುವುದು.ಯೋಧರ ಕುರಿತು ಹಾಡುಗಳಿರುವ ಧ್ವನಿ ಸಾಂದ್ರಿಕೆಯನ್ನು ಬಿಡುಗಡೆ ಮಾಡುವ ಮೂಲಕ ಯೋಧರಿಗೆ ಭಾವನಮನ ಸಲ್ಲಿಸುವುದಾಗಿ ತಿಳಿಸಿದರು.

ಬಳ್ಳಾರಿಯ ವೇದರಾಜು, ಹಾಸನದ ಸಂದೀಪ್‍ಶೆಟ್ಟಿ, ಬಾಗಲಕೋಟೆಯ ಸಿದ್ದಪ್ಪ ಕುಂಬಾರ್, ಬೆಳಗಾವಿಯ ಶಿವಾನಂದ ಮಾತೋಳಿ, ಉಮೇಶ್ ಯಳವಾರ್ ಈ ಐವರು ಯೋಧರ ಕುಟುಂಬಗಳಿಗೆ ಗೌರವ ಸಲ್ಲಿಸಲಾಗುವುದು ಎಂದರು.
ಭಾರತ ಸೇನೆ ನಿವೃತ್ತ ಅಧಿಕಾರಿ ಎ.ಎಸ್.ಕಾರ್ನಾಶಂಕರ್ ಉದ್ಘಾಟನೆ ಮಾಡಲಿದ್ದು, ಸಾಧನಕೆರೆ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಎಡಿಜಿಪಿ ಭಾಸ್ಕರ್‍ರಾವ್ ಹುತಾತ್ಮ ಯೋಧರ ಕುಟುಂಬಗಳಿಗೆ ಗೌರವಾರ್ಪಣೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕಸಾಪ ಗೌರವಾಧ್ಯಕ್ಷ ಎಂ.ತಿಮ್ಮಯ್ಯ, ಪ್ರತಿಷ್ಠಾನದ ಅಧ್ಯಕ್ಷ ರಾಮ್‍ಪ್ರಸಾದ್, ವಿಶ್ವ ಕನ್ನಡ ಸಾಂಸ್ಕøತಿಕ ಸಮ್ಮೇಳನದ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ 14 ಮಂದಿ ಸಾಧಕರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ