ಕಣ್ಮರೆಯಾಗುತ್ತಿರುವ ದೇಸಿ ಕಲೆ,ಕ್ರೀಡೆ ಮತ್ತು ಹಬ್ಬಗಳ ಹರಿವು ಮೂಡಿಸಬೇಕು

Varta Mitra News

ಯಶವಂತಪುರ, ಜ.18- ಕಣ್ಮರೆಯಾಗುತ್ತಿರುವ ದೇಸಿ ಕಲೆ, ಕ್ರೀಡೆ ಹಾಗೂ ಹಬ್ಬ-ಹರಿದಿನಗಳ ಮಹತ್ವವನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ತಿಳಿಸಿ ಅರಿವು ಮೂಡಿಸಲಾಗುತ್ತಿದೆ ಎಂದು ಮುಖ್ಯೋಪಾಧ್ಯಾಯ ಜಯರಾಮ್ ತಿಳಿಸಿದ್ದಾರೆ.
ಮಾಗಡಿ ಮುಖ್ಯರಸ್ತೆಯ ತಾವರೆಕೆರೆ ಗ್ರಾಮದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಿಕ್ಷಣ ಟ್ರ¸್ಟïನ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ಮಾತನಾಡಿದ ಅವರು, ಆಧುನಿಕತೆ ಭರಾಟೆಯಲ್ಲಿ ಗ್ರಾಮೀಣ ಸೊಗಡಿನ ಕಲೆ, ಕ್ರೀಡೆಗಳು ಮರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹಬ್ಬ -ಹರಿದಿನಗಳ ಆಚರಣೆ ಹಿನ್ನೆಲೆಯಲ್ಲಿ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುತ್ತಿದೆ ಎಂದರು.
ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಜತೆಗೆ ಸಂಕ್ರಾಂತಿ, ಯುಗಾದಿ, ಗಣೇಶೋತ್ಸವ, ಆಯುಧ ಪೂಜಾ, ದೀಪಾವಳಿ ಸೇರಿ ನಾಡಿನ ಎಲ್ಲ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಕ್ಕಳಿಗೆ ಓದಿನ ಜತೆಗೆ ಹಬ್ಬಗಳ ಆಹಾರ ಪದ್ಧತಿ, ನಮ್ಮ ನೆಲದ ಸಂಸ್ಕøತಿ, ಸಂಸ್ಕಾರ ಹಾಗೂ ಆಚಾರ-ವಿಚಾರಗಳನ್ನು ಪರಿಚಯಿಸಲಾಗುತ್ತಿದೆ ಎಂದರು.
ಸಂಕ್ರಾಂತಿ ಸುಗ್ಗಿಯ ಸಡಗರ ಶಾಲಾ ಆವರಣದಲ್ಲಿ ಎದ್ದು ಕಾಣುತ್ತಿತ್ತು.ರಾಗಿಯ ಕಣ, ಎಳ್ಳು-ಬೆಲ್ಲ, ಗೆಣಸು ಹಾಗೂ ಕಬ್ಬಿನ ಜಲ್ಲೆಗಳ ಸಿಂಗಾರ ಸೊಗಸಾಗಿತ್ತು.
ವಿದ್ಯಾರ್ಥಿಗಳು ಜಾನಪದ ನೃತ್ಯವಲ್ಲದೆ, ಗ್ರಾಮೀಣ ಕ್ರೀಡೆಗಳಾದ ಲಗೋರಿ, ಚಿನ್ನಿದಾಂಡು, ಕುಂಟೆ ಬಿಲ್ಲೆ, ಚೌಕಬಾರ, ಜೋಕಾಲಿ ಆಡಿ ಖುಷಿಪಟ್ಟರು. ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಅವರ ಪ್ರತಿಭೆ ಅನಾವರಣಗೊಳಿಸಲು ನೆರವಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ