ಅಲೋಕ್ ವರ್ಮಾ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿಯಿಲ್ಲ: ಸುಪ್ರೀಂ ಮಾಜಿ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್

ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್​ ವರ್ಮಾ ಅವರನ್ನು ವಜಾಗೊಳಿಸಿದ್ದು ಕೇಂದ್ರ ಸರ್ಕಾರದ ಆತುರದ ನಿರ್ಧಾರ ಎಂದು ಸುಪ್ರೀಂಕೋರ್ಟ್​ ಮಾಜಿ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪಟ್ನಾಯಕ್, ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಪ್ರಧಾನಿ ಮೋದಿ ನೇತೃತ್ವದ ಸಮಿತಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದು ಆತುರದ ನಿರ್ಧಾರವೆಂದು ತೋರುತ್ತದೆ ಎಂದು ತಿಳಿಸಿದ್ದಾರೆ.

ವರ್ಮಾ ಅವರ ವಿರುದ್ಧದ ತನಿಖೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​ ಆಸ್ಥಾನಾ ಅವರ ದೂರುಗಳನ್ನು ಆಧರಿಸಿತ್ತು. ಸಿವಿಸಿಯಿಂದ ಕಳುಹಿಸಲಾದ ವರದಿಗೆ ಆಸ್ಥಾನಾ ಸಹಿ ಮಾಡಿದ್ದರು. ಆದರೆ, ತನಿಖೆ ವೇಳೆ ಅವರ ಉಪಸ್ಥಿತಿ ಇರಲಿಲ್ಲ ಎಂದು ಹೇಳಿದ್ದಾರೆ.

ಅಲೋಕ್​ ವರ್ಮಾ ಅವರನ್ನು ಗುರುವಾರ ಹುದ್ದೆಯಿಂದ ವಜಾಗೊಳಿಸಿ ಅಗ್ನಿಶಾಮಕ ದಳದ ಡಿಜಿಯನ್ನಾಗಿ ನೇಮಿಸಲಾಗಿತ್ತು. ಆದರೆ, ಅದನ್ನು ಒಪ್ಪದ ಅಲೋಕ್​ ವರ್ಮಾ ರಾಜೀನಾಮೆ ನೀಡಿದ್ದರು.

Alok Verma Issue,former Supreme Court judge, A K Patnaik,no proof of corruption

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ