ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ವಜಾಗೊಳಿಸಿದ್ದು ಕೇಂದ್ರ ಸರ್ಕಾರದ ಆತುರದ ನಿರ್ಧಾರ ಎಂದು ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪಟ್ನಾಯಕ್, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಪ್ರಧಾನಿ ಮೋದಿ ನೇತೃತ್ವದ ಸಮಿತಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದು ಆತುರದ ನಿರ್ಧಾರವೆಂದು ತೋರುತ್ತದೆ ಎಂದು ತಿಳಿಸಿದ್ದಾರೆ.
ವರ್ಮಾ ಅವರ ವಿರುದ್ಧದ ತನಿಖೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರ ದೂರುಗಳನ್ನು ಆಧರಿಸಿತ್ತು. ಸಿವಿಸಿಯಿಂದ ಕಳುಹಿಸಲಾದ ವರದಿಗೆ ಆಸ್ಥಾನಾ ಸಹಿ ಮಾಡಿದ್ದರು. ಆದರೆ, ತನಿಖೆ ವೇಳೆ ಅವರ ಉಪಸ್ಥಿತಿ ಇರಲಿಲ್ಲ ಎಂದು ಹೇಳಿದ್ದಾರೆ.
ಅಲೋಕ್ ವರ್ಮಾ ಅವರನ್ನು ಗುರುವಾರ ಹುದ್ದೆಯಿಂದ ವಜಾಗೊಳಿಸಿ ಅಗ್ನಿಶಾಮಕ ದಳದ ಡಿಜಿಯನ್ನಾಗಿ ನೇಮಿಸಲಾಗಿತ್ತು. ಆದರೆ, ಅದನ್ನು ಒಪ್ಪದ ಅಲೋಕ್ ವರ್ಮಾ ರಾಜೀನಾಮೆ ನೀಡಿದ್ದರು.
Alok Verma Issue,former Supreme Court judge, A K Patnaik,no proof of corruption