ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯಕ್ಕೆ 3.4 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ ಕೇಂದ್ರ ಸರ್ಕಾರ

ಬೆಂಗಳೂರು,ಜ.9- ಸತತ ಎರಡು ವರ್ಷಗಳ ಕಾಯುವಿಕೆಯ ಬಳಿಕ, ಕೇಂದ್ರದ ಮಹತ್ವಾಕಾಂಕ್ಷೆಯ ಕೈಗೆಟುಕುವ ದರದ ವಸತಿ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣಗೊಳ್ಳುತ್ತಿದೆ. ಖರೀದಿದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಗಳು ತೋರಿದ ಆಸಕ್ತಿಗೆ ಧನ್ಯವಾದಗಳು. ಕೇಂದ್ರವು ರಾಜ್ಯಕ್ಕೆ 3.4 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಇದು ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಅತಿ ಹೆಚ್ಚು ಮನೆಗಳಾಗಿವೆ.

ಅಂತೆಯೇ ಹೆಬ್ರನ್ ಪ್ರಾಪರ್ಟೀಸ್, ಪೂರ್ವ ಬೆಂಗಳೂರಿನ ರಾಮಮೂರ್ತಿ ನಗರದ ತಂಬುಚೆಟ್ಟಿ ಪಾಳ್ಯದಲ್ಲಿ ಕೈಗೆಟುಕುವ ದರದ ವಸತಿ ಯೋಜನೆಯನ್ನು ಆರಂಭಿಸಿದೆ.

ಇತ್ತೀಚೆಗೆ ನಾವು 448 ಘಟಕಗಳನ್ನು ರೂ. 30 ಲಕ್ಷ ಮೌಲ್ಯಕ್ಕೆ ಬಿಡುಗಡೆ ಮಾಡಿದ್ದೇವೆ ಎಂದು ಹೆಬ್ರನ್ ಪ್ರಾಪರ್ಟೀಸ್ ಸಿಇಒ ಪ್ರೀನಾಂದ್ ಪ್ರೇಮಚಂದ್ರನ್ ತಿಳಿಸಿದ್ದಾರೆ. ಬಿಡಿಎ ಅನುಮೋದಿಸಿದ ಈ ಯೋಜನೆಯು 4.08 ಎಕರೆ ಭೂಮಿಯಲ್ಲಿ ನಿರ್ಮಾಣಗೊಂಡಿದೆ. ಡೆವಲಪರ್ಸ್ ಮತ್ತು ರಿಯಲ್ ಎಸ್ಟೇಟ್ ತಜ್ಞರು ಈ ವಲಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ, ಆದರೆ ಖಾಸಗಿ ವಲಯ ತೊಡಗಿಸಿಕೊಳ್ಳುವ ಅಗತ್ಯತೆ ಮತ್ತು ಮಹತ್ವಾಕಾಂಕ್ಷೆಯ ಯೋಜನೆಯ ಯಶಸ್ಸಿಗೆ ಸಬ್ಸಿಡಿ ನೀಡುವ ಅಗತ್ಯವನ್ನು ಒತ್ತಿ ಹೇಳಿದರು.

ಈ ಮನೆಗಳು ಕಡಿಮೆ ಆದಾಯದ ಗುಂಪುಗಳಿಗೆ ರೂ 9.95 ಲಕ್ಷಕ್ಕೆ ಲಭ್ಯವಿವೆ. ಮಧ್ಯಮ ಆದಾಯದ ಗುಂಪುಗಳಿಗೆ (ಎಂಐಜಿ) ರೂ.14 ಲಕ್ಷ ಮೌಲ್ಯದ ಮನೆಗಳಿವೆ. ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆಯಿಂದ ಖರೀದಿದಾರರು ಇಎಂಐ ಅನ್ನು 2,500 ರೂಪಾಯಿಗೆ ಇಳಿಸಿಕೊಳ್ಳಬಹುದು. ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಹಾಗೂ ಗುಣಮಟ್ಟವನ್ನು ಹೊಂದಿರುವ ಈ ಮನೆಗಳನ್ನು ಕೊಳ್ಳುವುದರಿಂದ ನಿಮ್ಮ ಹಣದ ಮೌಲ್ಯಕ್ಕೆ ಸರಿಯಾದ ಬೆಲೆ ಸಿಗುತ್ತದೆ ಎಂದು ಫೆಲಿಸಿಟಿ ಅಡೋಬ್ ಎಲ್‍ಎಲ್‍ಪಿ ನಿರ್ದೇಶಕ ಪ್ರಣವ್ ಶರ್ಮಾ ತಿಳಿಸಿದ್ದಾರೆ.

ಜನೆಯು ಕೋಲಾರ ಮತ್ತು ದೊಡ್ಡಬಳ್ಳಾಪುರದಲ್ಲಿ ಆರಂಭಗೊಳ್ಳಲಿದೆ. ರೂ 14 ಲಕ್ಷ ಮೌಲ್ಯದ ಮನೆಯಲ್ಲಿ ಕ್ಲಬ್, ಈಜುಕೊಳ, ಲಿಫ್ಟ್, ಮಕ್ಕಳ ಪ್ಲೇ ಪ್ರದೇಶ ಮತ್ತು ಪಾರ್ಕಿಂಗ್ ಸೌಲಭ್ಯಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ