ದೇಶದ ಬೇಡಿಕೆಯನ್ನು ಪೂರೈಸಿ ಹೊರದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಗಾರ್ಮೆಂಟ್ಸ್ ಕ್ಷೇತ್ರ ಬೆಳೆಯಬೇಕು, ಕೇಂದ್ರ ಸರ್ಕಾರದ ಜವಳಿ ನಿರ್ದೇಶಕ ಸುಶೀಲ್ ಗಾಯಕ್ವಾಡ್

ಬೆಂಗಳೂರು,ಜ.9- ಆಧುನಿಕ ತಂತ್ರಜ್ಞಾನ , ನೂತನ ವಿನ್ಯಾಸಗಳ, ಗುಣಮಟ್ಟದ ಗಾರ್ಮೆಂಟ್‍ಗಳನ್ನು ಉತ್ಪಾದಿಸಿ ದೇಶದ ಬೇಡಿಕೆ ಪೂರೈಸುವುದರ ಜೊತೆಗೆ ವಿದೇಶಕ್ಕೆ ರಫ್ತು ಮಾಡುವಂತೆ ಗಾರ್ಮೆಂಟ್ಸ್ ಕ್ಷೇತ್ರ ಬೆಳೆಯಲು ವ್ಯಾಪಕ ಅವಕಾಶಗಳಿವೆ.

ಕೇಂದ್ರ ಸರ್ಕಾರವೂ ಅದಕ್ಕೆ ಬೇಕಾದ ಎಲ್ಲ ರೀತಿ ನೆರವು ನೀಡುತ್ತಿದೆ ಎಂದು ಕೇಂದ್ರ ಸರ್ಕಾರದ ಜವಳಿ ನಿರ್ದೇಶಕ ಸುಶೀಲ್ ಗಾಯಕ್‍ವಾಡ್ ತಿಳಿಸಿದರು.

ಸೋಲಾಪುರ ಗಾರ್ಮೆಂಟ್ಸ್ ಉತ್ಪಾದಕರ ಸಂಘ ತುಮಕೂರು ರಸ್ತೆ ಡಾ.ಪ್ರಭಾಕರ್ ಕೋರೆ ಕನ್ವೆಷನ್ ಸೆಂಟರ್‍ನಲ್ಲಿ ಆಯೋಜಿಸಿದ್ದ ಇಂಡಿಯಾಸ್ ಯೂನಿಫಾರ್ಮ್ ಆ್ಯಂಡ್ ಗಾರ್ಮೆಂಟ್ಸ್ ಉತ್ಪಾದಕರ ಮೇಳ 3ನೇ ಆವೃತ್ತಿಗೆ ನಿರ್ದೇಶಕ ಸುಶೀಲ್ ಚಾಲನೆ ನೀಡಿದರು.

ದೇಶದಲ್ಲಿ ಗುಣಮಟ್ಟದ ಹಾಗೂ ಆಧುನಿಕ  ವಿನ್ಯಾಸದ ಗಾರ್ಮೆಂಟ್ಸ್‍ಗಳಿಗೆ ಸಾಕಷ್ಟು ಬೇಡಿಕೆ ಇದೆ. ದೇಶದ ಬೇಡಿಕೆಯನ್ನು ಪೂರೈಸಿ ವಿದೇಶಗಳಿಗೆ ರಫ್ತು ಮಾಡುವಂತೆ ನಮ್ಮ ಗಾರ್ಮೆಂಟ್ಸ್  ಕ್ಷೇತ್ರ ಬೆಳೆಯಬೇಕು. ಅದಕ್ಕಾಗಿ ಹಣಕಾಸಿನ ನೆರವು, ಅಗತ್ಯಸವಕರ್ಯ ಅಳವಡಿಕೆ ಸೇರಿದಂತೆ ಎಲ್ಲ ರೀತಿಯ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ. ಕ್ಲಸ್ಟರ್‍ಗಳನ್ನು ನಿರ್ಮಿಸಿ ದೊಡ್ಡ ಮಾರುಕಟ್ಟೆ ಒದಗಿಸುವ ಕೆಲಸ ಕೂಡ ಮಾಡಲಿದೆ ಎಂದು ಸುಶೀಲ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ