ಟೀಂ ಇಂಡಿಯಾ ಆಟಗಾರರ ಭರ್ಜರಿ ಸೆಲೆಬ್ರೇಷನ್

ಕಾಂಗರೂಗಳ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ಟೀಂ ಇಂಡಿಯಾ ಭರ್ಜರಿ ಪಾರ್ಟಿ ಮಾಡಿ ಸಂಭ್ರಮಿಸಿದೆ.
ಸೋಮವಾರ ಸಿಡ್ನಿ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆಗುತ್ತಿದ್ದಂತೆ ಭಾರತ 2-1 ಅಂತರದಿಂದ ಸರಣಿ ಗೆದ್ದು ಹೊಸ ಇತಿಹಾಸ ಬರೆಯಿತು. ನಾಯಕ ಕೊಹ್ಲಿ ಸೇರಿದಂತೆ ತಂಡದ ಆಟಗಾರರು ಆನ್‍ಫೀಲ್ಡ್‍ನಲ್ಲೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

ನಂತರ ಕೊಹ್ಲಿ ಪಡೆ ಹೋಟೆಲ್‍ಗೆ ಬಂದಾಗ ಭಾರತ್ ಆರ್ಮಿ ಸದಸ್ಯರು ಭರ್ಜರಿ ಸ್ವಾಗತ ನೀಡಿದರು. ಜೊತೆಗೆ ಟೀಂ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಇದಾದ ನಂತರ ಟೀಂ ಇಂಡಿಯಾ ಅಟಗಾರರು ಭಜ್ರಿ ಪಾರ್ಟಿ ಮಾಡಿದ್ದಾರೆ. ಸೆಲೆಬ್ರೇಷನ್‍ನಲ್ಲಿ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜೊತೆ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ