ಬುಮ್ರಾಗೆ ವಿಶ್ರಾಂತಿ: ಏಕದಿನ ಸರಣಿಗೆ ಸಿದ್ದಾರ್ಥ್ ಕೌಲ್, ಸಿರಾಜ್‍ಗೆ ಸ್ಥಾನ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಬೀಗಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿ ಮೇಲೆ ಕಣ್ಣಿಟ್ಟಿದೆ.

ಜ.12ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ತಂಡದ ಪ್ರಮುಖ ಬೌಲರ್ ಯಾರ್ಕರ್ ಸ್ಪಶಲಿಸ್ಟ್ ಜಸ್‍ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದೆ. ಇತ್ತಿಚೆಗೆ ಕಾಂಗರೂಗಳ ವಿರುದ್ದದ ಟೆಸ್ಟ್ ಸರಣಿಯಲ್ಲಿ ಬೂಮ್ರಾ ಕರಾರುವಕ್ ದಾಳಿ ನಡೆಸಿ ನಾಲ್ಕು ಟೆಸ್ಟ್ ಪಂದ್ಯಗಳಿಂದ ಬರೋಬ್ಬರಿ 21 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮುಂಬರುವ ವಿಶ್ವಕಪ್ ದೃಷ್ಟಿಯಿಂದ ವೇಗಿ ಬುಮ್ರಾಗೆ ವಿಶ್ರಾಂತಿ ನೀಡಲು ಆಯ್ಕೆ ಮಂಡಳಿ ನಿರ್ಧರಿಸಿದೆ. ಬುಮ್ರಾ ಬದಲಿಗೆ ಯುವ ವೇಗಿಗಳಾದ ಸಿದ್ದಾರ್ಥ್ ಕೌಲ್ ಮತ್ತು ಮೊಹ್ಮದ್ ಸಿರಾಜ್‍ಗೆ ಅವಕಾಶ ಕಲ್ಪಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ