ಚಿಕ್ಕಮಗಳೂರು, ಜ.9-ಕರ್ತವ್ಯಲೋಪದ ಆರೋಪದಡಿ ಚಿಕ್ಕಮಗಳೂರು ನಗರ ಠಾಣೆ ಪಿಎಸ್ಐ ಕೆ.ಆರ್.ರಘು ಅಮಾನತುಗೊಂಡಿದ್ದಾರೆ.
ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜನವರಿ 7 ರಂದು ನಗರ ಠಾಣೆಗೆ ದಿಢೀರ್ ಭೇಟಿ ನೀಡಿ ಠಾಣೆಯಲ್ಲಿ ಕರ್ತವ್ಯ ಪರಿಶೀಲನೆ ನಡೆಸುವ ವೇಳೆ ಪ್ರಕರಣಗಳ ಅಸಮರ್ಪಕ ತನಿಖೆಯಾಗಿರುವ ವಿಚಾರ ತಿಳಿದುಬಂದಿದ್ದು, ನಗರ ಬೀಟ್ ನಿರ್ವಹಣೆಯಲ್ಲಿ ಬೇಜವಾಬ್ದಾರಿ ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.