ನವದೆಹಲಿ: ಸುಪ್ರೀಂಕೋರ್ಟ್ ಆದೇಶ ಹಿನ್ನಲೆಯಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಇಂದು ಇಂದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸಿಬಿಐ ಆಂತರಿಕ ಕಿತ್ತಾಟ ಬಹಿರಂಗವಾದ ಬಳಿಕ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ರಜೆಯಲ್ಲಿ ಹೋಗುವಂತೆ ಕಳಿಸಿತ್ತು. ಅದನ್ನು ಪ್ರಶ್ನಿಸಿ ಅಲೋಕ್ ವರ್ಮಾ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಕಾನೂನು ಬಾಹಿರವಾಗಿ ಅಲೋಕ್ ವರ್ಮಾ ಅವರನ್ನು ರಜೆಗೆ ಕಳಿಸಿದೆ ಎಂದು ಹೇಳಿತ್ತು.
ಕೇಂದ್ರ ಸರ್ಕಾರದ ಆದೇಶದಂತೆ 77 ದಿನಗಳ ಕಾಲ ರಜೆಯಲ್ಲಿದ್ದ ಅಲೋಕ್ ವರ್ಮಾ ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಲೋಕ್ ವರ್ಮಾ ಅವರಿಗೆ ಯಾವುದೇ ನೀತಿ, ನಿಯಮಗಳನ್ನು ರೂಪಿಸುವ ಅಧಿಕಾರವಿರುವುದಿಲ್ಲ. ಆದರೆ, ಟ್ರಾನ್ಸ್ಫರ್, ಈಗಾಗಲೇ ನಡೆಯುತ್ತಿರುವ ತನಿಖೆ, ಹೊಸ ಪ್ರಕರಣಗಳು ಬಂದರೆ ಎಫ್ಐಆರ್ ದಾಖಲು ಮಾಡಲು ಸಂಪೂರ್ಣ ಅವಕಾಶವಿದೆ.
ಇನ್ನು ಅಲೋಕ್ ವರ್ಮಾ ಅವರು ಜನವರಿ 31 ರಂದು ನಿವೃತ್ತಿಯಾಗಲಿದ್ದಾರೆ.
Alok Verma, back in office, as CBI chief