
ಬೆಂಗಳೂರು, ಜ.5-ನಗರದ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ ಜ.19ರಂದು ಶನಿವಾರ ಲಾಲ್ಭಾಗ್ ಮತ್ತು ಮಾರತ್ಹಳ್ಳಿಯಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ಜಂಬೋ ಪಾಸ್ ಪೋರ್ಟ್ ಮೇಳವನ್ನು ಆಯೋಜಿಸಿದೆ.
ಈ ಮೇಳಕ್ಕಾಗಿ ಜ.16ರಂದು ಸಂಜೆ 4.30ಕ್ಕೆ ಅಪಾಯಿಂಟ್ಮೆಂಟ್ಗಳನ್ನು(ಸಾಮಾನ್ಯ ವರ್ಗದವರಿಗೆ ಮಾತ್ರ) ಬಿಡುಗಡೆ ಮಾಡಲಾಗುವುದು.
ಜಂಬೋ ಪಾಸ್ ಪೋರ್ಟ್ ಮೇಳದ ಸಂಪೂರ್ಣ ವಿವರಗಳಿಗಾಗಿ ಪಾಸ್ ಪೋರ್ಟ್ ಕಚೇರಿಗಳ ಆಯ್ಕೆ ಬೆಂಗಳೂರು ಇದರ ಅಡಿ www.passportindia.gov.in ಈ ಅಧಿಕೃತ ವೆಬ್ಸೈಟ್ಗೆ ದಯವಿಟ್ಟು ಭೇಟಿ ನೀಡಿ ಮತ್ತು ಪಾಸ್ ಪೋರ್ಟ್ ಮೇಳ ಅಗತ್ಯತೆಗಳಿಗೆ ಉಲ್ಲೇಖಿಸಬಹುದು ಎಂದು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ಭರತ್ ಕುಮಾರ್ ಕುಥಟಿ ಪ್ರಕರಣೆಯಲ್ಲಿ ತಿಳಿಸಿದ್ದಾರೆ.