
ಹೊಸದಿಲ್ಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಧನಾತ್ಮಕ ಹೆಜ್ಜೆ ಇಟ್ಟಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ ಎಂದು ಆರೆಸ್ಸೆಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯಂಥ ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಎನ್ ಐಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದತ್ತಾತ್ರೇಯ ಹೊಸಬಾಳೆಯವರು, ಮಾತುಕತೆ ಅಥವಾ ಅಗತ್ಯ ಕಾನೂನಿನ ಮೂಲಕ ಮಂದಿರ ನಿರ್ವಿುಸುವುದಾಗಿ 1989ರ ಪಾಲಂಪುರ ಬಿಜೆಪಿ ಅಧಿವೇಶನ ನಿರ್ಣಯಕ್ಕೆ ಮೋದಿಯವರ ಈ ಹೇಳಿಕೆ ಅನುರೂಪವಾಗಿದೆ ಎಂದಿದ್ದಾರೆ.
ಸಂವಿಧಾನಿಕವಾಗಿರುವ ಎಲ್ಲ ಮಾರ್ಗ ಅನುಸರಿಸಿ ಮಂದಿರ ನಿರ್ವಿುಸುವುದಾಗಿ ಬಿಜೆಪಿ 2014ರ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅವರ ಮೇಲೆ ನಂಬಿಕೆಯಿಟ್ಟು ಭಾರತದ ಜನತೆ ಬಹುಮತ ನೀಡಿದ್ದರು. ಈ ಅವಧಿಯಲ್ಲಿ ಸರ್ಕಾರ ತನ್ನ ಭರವಸೆ ಈಡೇರಿಸುತ್ತದೆ ಎಂಬ ಅಪೇಕ್ಷೆ ಭಾರತೀಯರಲ್ಲಿದೆ ಎಂದವರು ತಿಳಿಸಿದ್ದಾರೆ.
|