ಶಬರಿಮಲೆಯಲ್ಲಿ ಐತಿಹಾಸಿಕ ಘಟನೆ: 40 ವರ್ಷದೊಳಗಿನ ಇಬ್ಬರು ಮಹಿಳೆಯರಿಂದ ಅಯ್ಯಪ್ಪ ದೇಗುಲ ಪ್ರವೇಶ

 

ತಿರುವನಂತಪುರಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಪ್ರವೇಶಿಸುವ ಮೂಲಕ ಇಂದು ಇಬ್ಬರು ಮಹಿಳೆಯರು ಇತಿಹಾಸ ಸೃಷ್ಟಿ ಮಾಡಿದ್ದಾರೆ.

ದೇಗುಲ ಪ್ರವೇಶ ಮಾಡಿದ ಮಹಿಳೆಯರನ್ನು ಹೋರಾಟಗಾರರಾದ ಬಿಂದು ಮತ್ತು ಕನಕದುರ್ಗ ಎಂದು ಗುರುತಿಸಲಾಗಿದೆ. 40 ವರ್ಷದ ಒಳಗಿನ ಈ ಇಬ್ಬರು ಮಹಿಳೆಯರು ಮಧ್ಯರಾತ್ರಿ 3.45ರಲ್ಲಿ ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಂಗಳವಾರ ಮಧ್ಯರಾತ್ರಿ ಶಬರಿಗಿರಿ ಏರಲಾರಂಭಿಸಿದ ಈ ಇಬ್ಬರು ಮಹಿಳೆಯರಿಗೆ ಸಿವಿಲ್​ ವಸ್ತ್ರದಲ್ಲಿದ್ದ ಪೊಲೀಸರು ರಕ್ಷಣೆ ನೀಡಿ ಸರಿಸುಮಾರು 3.45ರ ಹೊತ್ತಿಗೆ ದೇಗುಲಕ್ಕೆ ಕರೆ ತಂದಿದ್ದಾರೆ ಎನ್ನಲಾಗಿದೆ.

ಪ್ರವೇಶಕ್ಕೆ ವಿರೋಧ ವ್ಯಕ್ತವಾಗಿಲ್ಲಪೊಲೀಸ್​​ ಭದ್ರೆತೆಯಿಲ್ಲದಂತೆ ನಾವು ಮಧ್ಯರಾತ್ರಿ 12 ಗಂಟೆಗೆ ಪಂಬಾಗೆ ಬಂದಿಳಿದೆವು. ಪಂಬಾದಿಂದ ಮುಂಜಾನೆ 12.30 ರ ಸುಮಾರಿಗೆ ಕಾಲ್ನಡಿಗೆ ಮೂಲ ಶಬರಿಮಲೆ ಸನ್ನಿಧಿ ತಲುಪಿದೆವು. ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಯೇ ಹಿಂತಿರುವುದಾಗಿ ಪಣತೊಟ್ಟ ನಮ್ಮ ವಿರುದ್ಧ ಯಾರು ಪ್ರತಿಭಟಿಸಲಿಲ್ಲ. ನಾವು ಅಯ್ಯಪ್ಪನ ದರ್ಶಕ್ಕಾಗಿ ಮೆಟ್ಟಿಲು ಹತ್ತಿ ದೇವಸ್ಥಾನ ತಲುಪಿದೆವು. ಸುಮಾರು ಭಕ್ತಾದಿಗಳು ದೇವಸ್ಥಾನದಲ್ಲಿಯೇ ಇದ್ದರು, ನಮ್ಮನ್ನು ಯಾರು ಪ್ರಶ್ನಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಕನಕದುರ್ಗ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಅಧಿಕೃತವಾಗಿ ಕೇರಳ ಸಿಎಂ ಪಿಣರಾಯ್ ವಿಜಯನ್​ ಅವರು ಕೂಡ, ಮಹಿಳೆಯರ ಪ್ರವೇಶ ನಿಜ ಎಂದು ಖಾತ್ರಿಪಡಿಸಿದ್ದಾರೆ. ಇನ್ನೊಂದೆಡೆ ಬಿಜೆಪಿಯ ಬಿ.ಎಲ್​​ ಸಂತೋಷ್​​ ಅವರು ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದೇ ಮಹಿಳೆಯರು ಡಿ. 18ರಂದು ದೇಗುಲ ಪ್ರವೇಶ ಮಾಡಲು ಯತ್ನಿಸಿದ್ದರು. ಆದರೆ, ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದ ಹೋರಾಟಗಾರರು ಬೆಟ್ಟದ ತಪ್ಪಲಲ್ಲೇ ಅವರನ್ನು ತಡೆದು ಹಿಮ್ಮೆಟ್ಟಿಸಿದ್ದರು.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ