ಸಿಡ್ನಿ ಟೆಸ್ಟ್ ನಿಂದ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಔಟ್

ಸಿಡ್ನಿ: ಟೀಂ ಇಂಡಿಯಾದ ಕೇರಂ ಸ್ಪೆಶಲಿಸ್ಟ್ ಆರ್.ಅಶ್ವಿನ್ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ನಾಲ್ಕನೆ ಮತ್ತು ಅಂತಿಮ ಟೆಸ್ಟ್ ಕದನದಿಂದ ಹೊರನಡೆದಿದ್ದಾರೆ.

ಆರ್.ಅಶ್ವಿನ್ ಶೇ100ರಷ್ಟು ಕೂಡ ಫಿಟ್ ಆಗಿಲ್ಲ. ಅವರನ್ನ ಆಯ್ಕೆಗೂ ಪರಿಗಣನೆಗೆ ತೆಗೆದುಕೊಂಡಿಲಲ್ ಎಂದು ಸ್ವತಃ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಅಡಿಲೇಡ್ ಟೆಸ್ಟ್ ಪಂದ್ಯದ ವೇಳೆ ಆರ್.ಅಶ್ವಿನ್ ಗಾಯದ ಸಮಸ್ಯೆಗೆ ಗುರಿಯಾಗಿದ್ರು. ನಂತರ ಪರ್ತ್ ಮತ್ತು ಮೆಲ್ಬೋರ್ನ್ ಟೆಸ್ಟ್ ಪಂದ್ಯವನ್ನ ಆಡಿರಲಿಲ್ಲ.

ಅಶ್ವಿನ್ ಬದಲು ತಂಡದ ಮತ್ತೋರ್ವ ಆಲ್‍ರೌಂಡರ್ ಕಣಕ್ಕಿಳಿದಿದ್ದರು. ಬ್ಯಾಟಿಂಗ್‍ನಲ್ಲಿ ಹೇಳಿಕೊಳ್ಳದಂತ ಪ್ರದರ್ಶನ ನೀಡದಿದ್ದರೂ ಬೌಲಿಂಗ್‍ನಲ್ಲಿ ಆಮೋಘ ಪ್ರದರ್ಶನ ನೀಡಿದ್ದಾರೆ. ರವೀಂದ್ರ ಜಡೇಜಾ ಬಾಕ್ಸಿಂಗ್ ಡೇ ಟೆಸ್ಟ್‍ನಲ್ಲಿ ಎರಡು ಇನ್ನಿಂಗ್ಸ್‍ಗಳಿಂದ ಐದು ವಿಕೆಟ್ ಪಡೆದು ಮಿಂಚಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ