ಮಾತಿನ ಚಕಮಕಿ, ಜಗಳ ನಡೆದರೆ ಅವರನ್ನು ಕೊಲೆಮಾಡಿ ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದ ವಿವಿ ಉಪಕುಲಪತಿ

ಲಖನೌ: ಯಾರೇ ಮಾತಿನ ಚಕಮಕಿ ನಡೆಸಿದರೂ ಅವರನ್ನು ಕೊಲೆ ಮಾಡಿ, ನಂತರ ಬಂದ ಪರಿಸ್ಥಿತಿಗಳನ್ನು ನಾನು ನೋಡಿಕೊಳ್ಳುತ್ತೇನೆಂದು ವಿದ್ಯಾರ್ಥಿಗಳಿಗೆ ಪೂರ್ವಾಂಚಲ್ ವಿಶ್ವವಿದ್ಯಾಲಯದ ಉಪಕುಲಪತಿ ಸಲಹೆ ನೀಡಿದ್ದು, ಪ್ರಾಂಶುಪಾಲರೊಬ್ಬರ ಈ ವಿವಾದಾತ್ಮಕ ಹೇಳಿಕೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿರುವ ಪೂರ್ವಾಂಚಲ್ ವಿಶ್ವವಿದ್ಯಾಲಯದ ಉಪ ಕುಲಪತಿ ರಾಜಾ ರಾಮ್ ಯಾದವ್ ಅವರು, ಯಾರೊಂದಿಗಾದರೂ ಮಾತಿನ ಚಕಮಕಿ ನಡೆಸಿದಾಗ ಸಮಸ್ಯೆ ಹಿಡಿದು ನನ್ನ ಬಳಿ ಬರಬೇಡಿ. ನೇರವಾಗಿಯೇ ಅವರನ್ನು ಹೊಡೆಯಿರಿ, ಸಾಧ್ಯವಾದರೆ ಅವರನ್ನು ಕೊಂದುಬಿಡಿ. ಮುಂದೆ ಬಂದಿದ್ದನ್ನು ನಾವು ನೋಡಿಕೊಳ್ಳುತ್ತೇವೆಂದು ಹೇಳಿದ್ದಾರೆ.

ಪೂರ್ವಾಂಚಲ್ ವಿವಿ ಪ್ರಾಂಶುಪಾಲರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಶೈಲೇಂದ್ರ ಸಿಂಗ್​, ಈ ರೀತಿ ಹೇಳಿಕೆ ಕೊಟ್ಟಿರುವ ಸಿಂಗ್​ ವಿದ್ಯಾರ್ಥಿಗಳಿಗೆ ಇನ್ಯಾವ ಪಾಠ ಮಾಡುತ್ತಾರೆ. ಉಪಕುಲಪತಿ ಹುದ್ದೆಗೆ ಪ್ರಾಮುಖ್ಯತೆ ಇದೆ. ಈ ಹುದ್ದೆಯಲ್ಲಿ ಕೂತು ಇಂಥ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ.

ಇದು ಅತ್ಯಂತ ಆಕ್ಷೇಪಾರ್ಹ ಹೇಳಿಕೆ. ಉಪಕುಲಪತಿಗಳು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಮಟ್ಟಕ್ಕೇರಲು ಉತ್ತೇಜನ ನೀಡಬೇಕು. ಆದರೆ ಉಪಕುಲಪತಿ ಗೂಂಡಾಗಿರಿ ಮಾಡುವುದಕ್ಕೆ ಉತ್ತೇಜನ ನೀಡಿದ್ದಾರೆ. ಇದು ದುರಂತವೇ ಸರಿ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ವಕ್ತಾರ ಮನೋಜ್​ ರೈ ಧೂಪ್​ಚಾಂಡಿ ತಿಳಿಸಿದ್ದಾರೆ.

ರಾಮ್ ಯಾದವ್ ಅವರು ನೀಡಿರುವ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ಭಾರೀ ಅಕ್ರೋಶ ವ್ಯಕ್ತವಾಗಿದೆ.
‘Kill, don’t come crying to me’: Purvanchal vice chancellor tells students

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ