ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ನಿರ್ದೇಶಕ ಮೃಣಾಲ್ ಸೇನ್‌ ವಿಧಿವಶ

ಮುಂಬೈ: ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಬಾಂಗಾಳಿ ಖ್ಯಾತ ಚಿತ್ರ ನಿರ್ದೇಶಕ ಮೃಣಾಲ್ ಸೇನ್‌ (95) ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ 10.30ರ ಸುಮಾರಿಗೆ ತಮ್ಮ ನಿವಾಸ ಕೋಲ್ಕತಾದ ಭವಾನಿಪೋರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಏಕ್‌ ಮೃಗಯಾದಂಥಹ ಮನೋಜ್ಞ ಚಿತ್ರವನ್ನು ನಿರ್ದೇಶಿಸಿದ ಮೃಣಾಲ್‌ ಸೇನ್‌ ಕೋಲ್ಕೊತದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಬೆಂಗಾಲಿ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಮೃಣಾಲ್‌ ಸೆನ್‌ ನಿರ್ದೇಶನಕ್ಕೆ ಮನಸೋತಿತ್ತು. ಬೆಂಗಾಲ್‌ನ ಮತ್ತೊಬ್ಬ ಮಹಾನ್‌ ನಿರ್ದೇಶಕ ಸತ್ಯಜಿತ್‌ ರೇ ಸಮಕಾಲೀನರಾದ ಮೃಣಾಲ್‌ ಸೆನ್‌, ಏಕ್‌ ದಿನ್‌ ಅಚಾನಕ್‌, ಪದಾತಿಕ್‌, ಮೃಗಯಾದಂಥ ಮಹಾನ್‌ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ರಾಷ್ಟ್ರ, ಅಂತಾರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಮೃಣಾಲ್‌ ಸೆನ್‌ ಮುಡಿಗೇರಿವೆ. ಚಿತ್ರರಂಗಕ್ಕೆ ಅನುಪಮ ಸೇವೆ ನೀಡಿದ ಮೃಣಾಲ್‌ ಸೆನ್‌ ಅವರಿಗೆ 2003ರಲ್ಲಿ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2017ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಮೃಣಾಲ್‌ ಸೇನ್‌ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿ, ಸಂತಾಪ ಸೂಚಿಸಿದ್ದಾರೆ. ಸಿನಿಮಾ ರಂಗಕ್ಕೆ ಮೃಣಾಲ್ ಸಾವು ತುಂಬಲಾರದ ನಷ್ಟ ಎಂದು ತಿಳಿಸಿದ್ದಾರೆ.

1923 ಮೇ 14ರಂದು ಬಾಂಗ್ಲಾದೇಶದ ಫರಿದಾಪುರದಲ್ಲಿ ಜನಿಸಿದ್ದ ಅವರು ಪ್ರೌಢ ಶಿಕ್ಷಣ ಮುಗಿಸಿದ ನಂತರ ಕೋಲ್ಕತಾಗೆ ಆಗಮಿಸಿದ್ದರು. ಬಳಿಕ ಸ್ಕಾಟಿಶ್‌ ಚರ್ಚ್‌ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದ ಅವರು ಕೋಲ್ಕತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಚಲನಚಿತ್ರ ನಿರ್ಮಾಪಕರಾಗಿದ್ದ ಇವರು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಿನಿಮಾದ ಮಹಾನ್ ರಾಯಭಾರಿಗಳ ಪೈಕಿ ಒಬ್ಬರಾಗಿದ್ದರು.

Iconic Filmmaker, Mrinal Sen,Dies At 95

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ