ಚೆನ್ನೈ: ಸಧ್ಯದ ದೇಶದ ರಾಜಕೀಯ ಸ್ಥಿತಿ ಗಮನಿಸಿದರೆ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂದು ಹೇಳಲಾಗದು ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದರು.
ತಮಿಳುನಾಡಿನ ರಾಮೇಶ್ವರ ದೇವಾಲಯಕ್ಕೆ ತೆರಳಲಿದ್ದ ಬಾಬಾ ಮಧುರೈ ವಿಮಾನ ನಿಲ್ದಾಣದಲ್ಲಿ ಮಾತನಾಡಿ, 2019 ರ ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆಂದು ಹೇಳಲಾಗದು. ಮುಂದಿನ ಪ್ರಧಾನಿ ಯಾರಾಗುತ್ತಾರೆ? ದೇಶವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಅರಿಯಲು ಸಾಧ್ಯವಿಲ್ಲ ಎಂದರು.
ರಾಜಕೀಯ ಸ್ಥಿತಿಗತಿ ತುಂಬ ಕುತೂಹಲ ಹುಟ್ಟಿಸಿದೆ. ಅಲ್ಲಿ ತುಂಬ ಹೋರಾಟ ನಡೆಯುತ್ತಿದೆ. ನಾನು ವೈಯಕ್ತಿಯವಾಗಿ ಯಾವುದೇ ಪಕ್ಷ, ವ್ಯಕ್ತಿಯನ್ನು ಬೆಂಬಲಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ ಎಂದು ತಿಳಿಸಿದರು.
ರಾಜಕೀಯ ಅಸ್ಥಿರತೆ, ಹೋರಾಟ, ಕಿತ್ತಾಟಗಳು ದೇಶಕ್ಕೆ ಒಳ್ಳೆಯದಲ್ಲ. ನನ್ನ ಉದ್ದೇಶ ಹಿಂದು ದೇಶ ನಿರ್ಮಾಣವಲ್ಲ, ಅಧ್ಯಾತ್ಮಿಕ ದೇಶ ಕಟ್ಟುವುದು. ರಾಜಕೀಯದ ಬಗ್ಗೆ ಆಸಕ್ತಿಯಿಲ್ಲ ಎಂದರು.
Difficult to say who will be next PM, Baba Ramdev