ಬಾಬಾ ರಾಮ್ ದೇವ್ ರನ್ನು ಕೂರಿಸಿಕೊಂಡು ಬೈಕ್ ರೈಡ್ ಮಾಡಿದ ಸದ್ಗುರು ಜಗ್ಗಿ ವಾಸುದೇವ್

ಕೊಯಂಬತ್ತೂರ್: ಆಧ್ಯಾತ್ಮಿಕ ನಾಯಕ, ಈಶಾ ಫೌಂಡೇಷನ್​ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್​ ಅವರು ಯೋಗ ಗುರು ಬಾಬಾ ರಾಮ್​ ದೇವ್​ ಅವರನ್ನು ಬೈಕ್​ ಮೇಲೆ ಕೂರಿಸಿಕೊಂಡು ಬೈಕ್ ರೈಡಿಂಗ್​ ಮಾಡಿದ್ದಾರೆ.

ಇತ್ತೀಚೆಗೆ ಬಾಬಾ ರಾಮ್​ ದೇವ್​ ಅವರು ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಜಗ್ಗಿ ವಾಸುದೇವ್​ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಗ ಸದ್ಗುರು ತಮ್ಮ ಡುಕ್ಕಾಟಿ ಸ್ಕ್ರ್ಯಾಂಬ್ಲರ್​ ಬೈಕ್​ನ ಹಿಂಬದಿಯಲ್ಲಿ ರಾಮ್​ದೇವ್​ ಅವರನ್ನು ಕೂರಿಸಿಕೊಂಡು ಆಶ್ರಮದಲ್ಲೊಂದು ಸುತ್ತು ಹಾಕಿ ಬಂದರು.

ಸದ್ಗರು ಮತ್ತು ರಾಮ್​ ದೇವ್​ ಇಬ್ಬರು ಬೈಕ್​ ರೈಡ್​ ಮಾಡುತ್ತಿರುವ ದೃಶ್ಯವನ್ನು ಸ್ವತಃ ಸದ್ಗುರು ಅವರೇ ‘ಬೈಕ್​ ಡ್ಯೂಡ್ಸ್​’ ಎಂಬ ಹೆಸರಿನಲ್ಲಿ ತಮ್ಮ ಯ್ಯೂಟ್ಯೂಬ್​ ಚಾನೆಲ್​ನಲ್ಲಿ ಪ್ರಕಟಿಸಿದ್ದಾರೆ.

Sadhguru Jaggi Vasudev,Baba Ramdev,Bike riding

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ