
ಬೆಂಗಳೂರು,ಡಿ.23- ಆಡುಗೋಡಿ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದ ದ್ವಿಚಕ್ರ ವಾಹನಗಳನ್ನು ಡಿ.28ರಂದು ಇದೇ ಠಾಣೆ ಆವರಣದಲ್ಲಿ ಬಹಿರಂಗ ಹರಾಜುಗೊಳಿಸಲಾಗುತ್ತಿದೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಅಯುಕ್ತರ ಆದೇಶದಂತೆ ಡಿ.28ರಂದು ಬೆಳಗ್ಗೆ10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ದ್ವಿಚಕ್ರವಾಹನಗಳ ಬಹಿರಂಗ ಹರಾಜು ಮಾಡುತ್ತಿದ್ದು, ಆಸಕ್ತಿವುಳ್ಳವರು ಭಾಗವಹಿಸಬೇಕೆಂದು ಕೋರಲಾಗಿದೆ.