ಬೆಂಗಳೂರು, ಡಿ.21- ರೈಲ್ವೆ ಪ್ರಯಾಣ ಟಿಕೆಟ್ಗಳನ್ನು ಕಾಯ್ದಿರಿಸುವಿಕೆಗೆ ಈಗ ಯಾವುದೇ ಸೇವಾ ಶುಲ್ಕ ಅಥವಾ ಗೇಟ್ವೇ ಶುಲ್ಕವನ್ನಾಗಲಿ ನೀಡಬೇಕಾಗಿಲ್ಲ. ಆನ್ಲೈನ್ನಲ್ಲಿ ಹಲವಾರು ಕ್ರಾಂತಿಕಾರಿ ತಂತ್ರಜ್ಞಾನವನ್ನು ತಂದಿರುವ ಪೇಟಿಎಂ ಈಗ ಹೊಸ ಯೋಜನೆಯನ್ನು ಅನಾವರಣಗೊಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಪೇಟಿಎಂನ ಉಪಾಧ್ಯಕ್ಷ ಅಭಿಷೇಕ್ ರಾಜನ್ ರೈಲ್ವೆ ಟಿಕೆಟ್ಗಳನ್ನು ಈಗ ಅತಿಸುಲಭವಾಗಿ ಕಾಯ್ದಿರಿಸಬಹುದಾಗಿದೆ. ಹಿಂದೆ ಪ್ರಯಾಣಿಕರು ಹಲವು ಶುಲ್ಕಗಳನ್ನು ಪಾವತಿಸಿ ಕಾಯಬೇಕಾಗಿತ್ತು.ಆದರೆ ಈಗ ತಮ್ಮ ಅಂಗೈಯಲ್ಲೇ ಎಲ್ಲಾ ಸೌಲಭ್ಯಗಳನ್ನು ಯಾವುದೇ ಶುಲ್ಕವಿಲ್ಲದೆ ನೀಡಲಾಗುತ್ತಿದೆ.ಎಲ್ಲಾ ರೀತಿಯ ಮಾಹಿತಿಗಳನ್ನು ಕೂಡ ಪಡೆಯಬಹುದಾಗಿದೆ.
ಅನಿವಾರ್ಯ ಕಾರಣಗಳಿಂದ ಪ್ರಯಾಣವನ್ನು ರದ್ದುಗೊಳಿಸಿದರೆ ಅವರ ಟಿಕೆಟ್ ದರವನ್ನು ಕ್ಷಣಾರ್ಧದಲ್ಲೇ ವಾಪಸ್ ಬರಲಿದೆ.ಆನ್ಲೈನ್ ಮೂಲಕ ರೈಲು ಪ್ರಯಾಣ ಟಿಕೆಟ್ಗಳನ್ನು ಕಾಯ್ದಿರಿಸುವುದನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.