ಇದೇ 23ರಂದು ಮಲ್ಲೇಶ್ವರದ ಜಲ ಮಂಡಳಿ ರಜತ ಭವನದಲ್ಲಿ ಶ್ರೀ ಜೇನು ಕಲ್ಲೋತ್ಸವ

ಬೆಂಗಳೂರು, ಡಿ.21- ನಗರದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಭಕ್ತರ ಬಳಗದ ವತಿಯಿಂದ ಶ್ರೀ ಜೇನು ಕಲ್ಲೋತ್ಸವವನ್ನು ಡಿ.23ರಂದು ಮಲ್ಲೇಶ್ವರಂ, 8ನೆ ಮುಖ್ಯ ರಸ್ತೆ , 19ನೆ ಕ್ರಾಸ್‍ನಲ್ಲಿರುವ ಜಲ ಮಂಡಳಿಯ ರಜತ ಭವನದಲ್ಲಿ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಭಕ್ತರ ಬಳಗದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಚಂದ್ರಶೇಖರ್ ಮಾತನಾಡಿ, ಡಿ.23ರಂದು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಅದೇ ದಿನ ಮಧ್ಯಾಹ್ನ ಯಾದಾಪುರ ಶ್ರೀ ಕೆಂಚಮ್ಮ ದೇವಿ ಕಳಸ ಪೂಜೆಯೊಂದಿಗೆ ಮಹಾ ಮಂಗಳಾರತಿ ನಂತರ ಕೋಣಕುಂಭ ಕಳಸದೊಂದಿಗೆ ಜಾನಪದ ಕಲಾ ಮೇಳದೊಂದಿಗೆ ಅದ್ಧೂರಿ ಪಲ್ಲಕ್ಕಿ ಉತ್ಸವ ರಜತ ಭವನದಿಂದ ಹೊರಟು 17ನೆ ಕ್ರಾಸ್‍ನಲ್ಲಿರುವ ಶ್ರೀ ವಿನಾಯಕ ದೇವಸ್ಥಾನ ತಲುಪಲಿದೆ.

ನಂತರ ಹೂವಿನ ರಥದ ಉತ್ಸವದೊಂದಿಗೆ ಮತ್ತೆ ರಜತ ಭವನಕ್ಕೆ ಹಿಂದಿರುಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಬಳಗದ ವತಿಯಿಂದ ಸನ್ಮಾನ ಹಮ್ಮಿಕೊಳ್ಳಲಾಗುವುದು.ನಂತರ ಭಜನೆ, ಭಕ್ತಿಗೀತೆ, ಭರತನಾಟ್ಯ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ ಎಂದು ಚಂದ್ರಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಿ.ಎಂ.ಬಸವರಾಜು, ವಿ.ವಿ.ಪ್ರಕಾಶ್, ಕೆ.ಯು.ಶಿವಕುಮಾರ್, ಎಚ್.ಎನ್.ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ