ಬೆಂಗಳೂರು, ಡಿ.21- ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಶ್ರೀ ಕಾಲಭೆರವಾಷ್ಟಮಿ ಪ್ರಯುಕ್ತ ಇದೇ ಡಿ.29ರಂದು ಭೆರವ ಮಾಡಿ, ಭಜನಾ ಮೇಳ ಮತ್ತು ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ನಡೆಸಲಾಗುವುದು.
ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಬೆಳಗ್ಗೆ 7 ರಿಂದ ಕಾಲಭೆರವಾಷ್ಟಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.
ಅಷ್ಟಮಿ ಪ್ರಯುಕ್ತ ಪಂಚಾಮೃತಾಭಿಷೇಕ, ಭಸ್ಮಾಭಿಷೇಕ, ಬಿಲ್ವಾಭಿಷೇಕ, ಪುಷ್ಪಾಭಿಷೇಕ, ಸುಗಂಧ ದ್ರವ್ಯಾದಿಗಳೊಂದಿಗೆ ಸ್ವಾಮಿಯನ್ನು ಪೂಜಿಸಲಾಗುವುದು. ನಂತರ ಸ್ವಾಮಿಯಗಿರಿ ಪ್ರದಕ್ಷಿಣಾ ಉತ್ಸವ ನೆರವೇರಲಿದೆ.
ಶ್ರೀ ಕಾಲಭೆರವಾಷ್ಟಮಿ ಆಚರಣೆಯಲ್ಲಿ ಭಾಗವಹಿಸುವ ಭೆರವ ಮಾಲಾಧಾರಿಗಳು ಶ್ರೀಕ್ಷೇತ್ರಕ್ಕೆ ಡಿ.28ರ ರಾತ್ರಿಯೇ ವಾಸ್ತವ್ಯಕ್ಕೆ ಬರಬೇಕು.ಹಿಂದಿನ ದಿನ ವಾಸ್ತವ್ಯಕ್ಕೆ ಬರಲು ಸಾಧ್ಯವಾಗದಿದ್ದಲ್ಲಿ 29ರಂದು ಬೆಳಗ್ಗೆ ಶ್ರೀಕ್ಷೇತ್ರದಲ್ಲಿ ಇರಬೇಕು.ಬೆಳಗ್ಗೆಯಿಂದ ಸಂಜೆವರೆಗೂ ವ್ರತನಿಷ್ಠರಾಗಿರಬೇಕು ಎಂದು ತಿಳಿಸಲಾಗಿದೆ.