ಬ್ಯಾಂಕ್ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು, ಡಿ.21- ಬ್ಯಾಂಕ್ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇಂದು ಬ್ಯಾಂಕ್ ಆಫೀಸರ್ರ್ಸ್ ಯೂನಿಯನ್ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಹಲವೆಡೆ ಬೆಂಬಲ ವ್ಯಕ್ತವಾದರೆ, ಮತ್ತೆ ಕೆಲವೆಡೆ ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು ಕಂಡುಬಂತು.

ನಾಳೆ ನಾಲ್ಕನೆ ಶನಿವಾರ.ಬ್ಯಾಂಕ್‍ಗೆ ರಜೆ ಇದೆ.ಡಿ.23 ಭಾನುವಾರ, 24 ಸೋಮವಾರ ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. 25 ಕ್ರಿಸ್‍ಮಸ್. ಬ್ಯಾಂಕ್‍ಗಳಿಗೆ ರಜೆ ಇದೆ.ಈ ನಡುವೆ 26ರಂದು ಬ್ಯಾಂಕ್‍ಗಳ ಒಕ್ಕೂಟದ ಮಹಾವೇದಿಕೆ ಮುಷ್ಕರಕ್ಕೆ ಕರೆ ನೀಡಿದೆ.ಹೀಗಾಗಿ ನಾಲ್ಕೈದು ದಿನಗಳ ಕಾಲ ಬ್ಯಾಂಕ್‍ಗಳು ಕಾರ್ಯನಿರ್ವಹಿಸುವುದಿಲ್ಲ. ಗ್ರಾಹಕರಿಗೆ ತೊಂದರೆಯಾಗುತ್ತದೆ.ಬ್ಯಾಂಕ್ ವಹಿವಾಟಿನಲ್ಲಿ ವ್ಯತ್ಯಯವಾಗುತ್ತದೆ.ಇಂದಿನಿಂದಲೇ ಮುಷ್ಕರದ ಬಿಸಿ ಹಲವೆಡೆ ತಟ್ಟಿದೆ.

ಹಲವೆಡೆ ಮುಷ್ಕರಕ್ಕೆ ಬ್ಯಾಂಕ್‍ಗಳವರು ಬೆಂಬಲ ನೀಡಿದರೆ, ಮತ್ತೆ ಕೆಲವೆಡೆ ಗ್ರಾಹಕರಿಗೆ ಸೇವೆ ಒದಗಿಸಿದ್ದು ಕಂಡುಬಂತು. ನಾಳೆ ಮತ್ತು ನಾಡಿದ್ದು ಎರಡು ದಿನಗಳು ರಜೆ ಇದೆ.ಎಸ್‍ಬಿಐ ಸೇರಿದಂತೆ ಕೆಲವು ಬ್ಯಾಂಕ್‍ಗಳು ಮಾಮೂಲಿಯಂತೆ ಕಾರ್ಯನಿರ್ವಹಿಸುತ್ತಿದ್ದವು.ಸಂಘಟನೆಯವರು ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ