ನವದೆಹಲಿ: ತ್ರಿವಳಿ ತಲಾಖ್ ಮಸೂದೆ ಅಥವಾ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆಯನ್ನು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮಂಡಿಸಿದೆ.
2019 ರ ಸಂಸತ್ ಚುನಾವಣೆಗೂ ಮುನ್ನ ಸಂಸತ್ ನಲ್ಲಿ ಮಸೂದೆಗೆ ಅಂಗೀಕಾರ ಪಡೆಯುವ ಉದ್ದೇಶ ಹೊಂದಿರುವ ಸರ್ಕಾರ, ಕಳೆದ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕರಿಸಲು ವಿಫಲವಾಗಿತ್ತು. ಈ ಬಳಿಕ ಸೆ.19 ರಂದು ತ್ರಿವಳಿ ತಲಾಖ್ ನ್ನು ಕ್ರಿಮಿನಲ್ ಅಪರಾಧಗೊಳಿಸಿ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು.
ಈ ನಡುವೆ ತಲಾಖ್ ವಿಧೇಯಕವನ್ನ ಸಂಸದ ಶಶಿ ತರೂರ್ ವಿರೋಧಿಸಿದ್ದು, ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ಈ ವಿಧೇಯಕ ಮಂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 11ರಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನ ಮುಂದಿನ ವರ್ಷದ ಜನವರಿ 8 ರವರೆಗೆ ನಡೆಯಲಿದೆ. ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನ ತಡವಾಗಿ ಆರಂಭವಾಗಿತ್ತು.
Parliament,Fresh bill,Triple Talaq introduced in Lok Sabha