ನವದೆಹಲಿ: ರೈತರ ಸಾಲಮನ್ನಾ ಯೋಜನೆಯಿಂದ ನಿಜಕ್ಕೂ ರೈತರ ಬದುಕು ಹಸನಾಗಿದೆಯೇ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಪ್ರಶ್ನಿಸಿದ್ದಾರೆ.
ಚುನಾವಣೆ ಆಯೋಗಕ್ಕೆ ಪತ್ರ ಬರೆದಿರುವ ರಾಜನ್ ರಾಜಕೀಯ ಪಕ್ಷಗಳು ಸಾಲಮನ್ನಾ ಮಾಡುತ್ತಿರುವುದರಿಂದ ರಾಷ್ಟ್ರದ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿವರಿಸಿದ್ದಾರೆ. ಸಾಲಮನ್ನಾ ಚುನಾವಣೆ ಭರವಸೆಗಳ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಸಲಹೆ ನೀಡಿದ್ದಾರೆ.
ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ, ಪ್ರಂಜುಲ್ ಭಂಡಾರಿ, ಸಜ್ಜಿದ್ ಚಿನಾಯ್, ಮೈತ್ರೀಶ್ ಘಟಕ್, ಗೀತಾ ಗೋಪಿನಾಥ್, ಅಮರ್ಥ್ಯ ಲಹಿರಿ, ನೀಲಕಾಂತ್ ಮಿಶ್ರಾ, ಪ್ರಾಚಿ ಮಿಶ್ರಾ, ಕಾರ್ತಿಕ್ ಮುರಳಿದರನ್, ರೋಹಿಣಿ ಪಾಂಡೆ, ಈಶ್ವರ್ ಪ್ರಸಾದ್ ಮತ್ತು ಸೋಮನಾಥನ್ ಅವರ ಜತೆಗೂಡಿ ರಘುರಾಮ್ ರಾಜನ್ ಭಾರತದ ಆರ್ಥಿಕ ಕಾರ್ಯತಂತ್ರ ವರದಿಯನ್ನು ಸಿದ್ಧ ಪಡಿಸಿದ್ದಾರೆ.
ವರದಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಮುಂದಿನ 5 ವರ್ಷಗಳಲ್ಲಿ ಯಾವ ಆರ್ಥಿಕ ನೀತಿಗೆ ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ವಿವರಿಸಿದ್ದಾರೆ. ಭಾರತದ ಆರ್ಥಿಕ ಸ್ಥಿತಿ ಅಭಿವೃದ್ಧಿಗಾಗಿ ನಡೆಸಿದ ಕಟು ವಿಶ್ಲೇಷಣೆ ಇದು. ಇದರ ಹಿಂದೆ ಯಾವುದೇ ಸರಕಾರ ಅಥವಾ ಪಕ್ಷವನ್ನು ಗುರಿಯಾಗಿಸಿಕೊಂಡಿಲ್ಲ ಎಂಬುದನ್ನು ರಾಜನ್ ಸ್ಪಷ್ಟಪಡಿಸಿದ್ದಾರೆ.
Not Loan Waivers, Raghuram Rajan,What Will Solve Farm Distress