ಬೆಂಗಳೂರು, ಡಿ.15-ಪಿಜ್ಹಾ ,ಬರ್ಗರ್ನಂತಹ ಆಹಾರ ವ್ಯಾಮೋಹ ಬಿಟ್ಟು ಸ್ವದೇಶಿ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವಂತರಾಗಿ ಎಂದು ಯುಎಸ್ಎ ಸಾಫ್ಟವೇರ್ ಇಂಜಿನಿಯರ್ ಎಸ್.ಮಹೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 3ನೇ ವರ್ಷದ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರೋಗ್ಯವೇ ಭಾಗ್ಯ ಎಂಬಂತೆ ಬೇರೆ ದೇಶದ ಅಹಾರ ಪದಾರ್ಥಗಳನ್ನು ಸೇವಿಸುವುದನ್ನು ಬಿಟ್ಟು ಸ್ವದೇಶಿ ತರಕಾರಿ, ಹಣ್ಣುಗಳನ್ನು ಸೇವಿಸಿ ಉತ್ತಮ ಆರೋಗ್ಯವಂತರಾಗಿ ಎಂದು ಸಲಹೆ ನೀಡಿದರು.
ವಿದೇಶಿ ಪದಾರ್ಥಗಳನ್ನು ಕಡಿಮೆ ಮಾಡಿ, ಸಂಬಂಧಗಳಿಗೆ ಬೆಲೆ ಕೂಡಿ, ಎಲ್ಲರ ಜೊತೆಗೆ ಅನ್ಯೂನ್ಯ ವಾಗಿರಿ, ಮಕ್ಕಳನ್ನು ಅಸ್ತಿಯನ್ನಾಗಿ ಮಾಡಿ, ಮಕ್ಕಳಿಗೆಗಾಗಿ ಅಸ್ತಿ ಮಾಡಬೇಡಿ, ಅವರನ್ನು ಅರೋಗ್ಯವಂತರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ರಾಮಚಂದ್ರ, ಬಿಬಿಎಂಪಿ ಸದಸ್ಯೆ ನಳಿನಾ ಮಂಜು, ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ಅಧ್ಯಕ್ಷರಾದ ಕೆ.ಟಿ.ಚಂದ್ರು, ಮುಖಂಡರಾದ ಹಾಲಪ್ಪಗೌಡ, ನಾಗರಾಜ್, ಕೆ.ಟಿ.ಚಂದ್ರು, ಕೆ.ಅರ್.ಮಹೇಶ್ ಬಾಬು, ಹೆಚ್.ಎಂ.ಶಿವ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.