ಹಗ್ಸ್-ನೋ-ಡ್ರಗ್ಸ್ ಕ್ಯಾಂಪೇನ್ನಲ್ಲಿ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಬೆಂಗಳೂರು, ಡಿ.15-ಝಿ ಸಮೂಹದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಂಗ ಹೆಲ್ಪಿಂಗ್ ಹಾಟ್ರ್ಸ್ ಮಾದಕ ವಸ್ತು ವಿರೋಧಿ ಆ್ಯಂಟಿ ಡ್ರಗ್ಸ್ ವಾಕಥಾನ್ ಆಯೋಜಿಸಿತ್ತು.

ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಾಲ್ಕು ತಿಂಗಳ ಈ ವಾಕಥಾನ್‍ಗೆ ಚಾಲನೆ ನೀಡಲಾಯಿತು. ಈ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬೆಂಗಳೂರು ನಗರ ಪೊಲೀಸ್‍ಆಯುಕ್ತ ಸುನೀಲ ಕುಮಾರ್, ಆರ್‍ಬಿಐನ ಮಾಜಿ ಉಪಗೌರ್ನರ್ ಆರ್.ಗಾಂಧಿ, ಕಾಪೆರ್Çರೇಟ್ ಸಲಹೆಗಾರ ಅನಂತರವಿ, ರಾಜ್ಯ ಎನ್‍ಎಸ್‍ಎಸ್ ಅಧಿಕಾರಿ ಡಾ.ಗಣನಾಥ ಶೆಟ್ಟಿ ಟಕ್ಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಮಾಜವನ್ನು ಮಾದಕವಸ್ತು ಮುಕ್ತ ಸಮಾಜವನ್ನಾಗಿ ಮಾಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಮೊದಲ ಸರಣಿಯ ಹಗ್ಸ್-ನೋ-ಡ್ರಗ್ಸ್ ಕ್ಯಾಂಪೇನ್‍ನಲ್ಲಿ 50 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜ್ಯೋತಿ ಮೂರ್ತಿ ನೇತೃತ್ವದ ಹೆಲ್ಪಿಂಗ್ ಹಾರ್ಟ್ ನಡೆಯುತ್ತಿದ್ದು, ಇವರಿಗೆ ವಿವಿಧ ಕ್ಷೇತ್ರಗಳ ಸಮಾನಮನಸ್ಕರ ತಂಡ ನೆರವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜ್ಯೋತಿ ಮೂರ್ತಿ ಅವರು, ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಮತ್ತು ಬಡ ವರ್ಗದ ಜನರಿಗೆ ನೈತಿಕ ಮತ್ತು ಹಣಕಾಸು ನೆರವು ನೀಡುವ ಮೂಲಕ ಅವರನ್ನು ಸಬಲೀಕರಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ