ನವದೆಹಲಿ: ಆರ್ಬಿಐ ಬಂಡವಾಳ ಮೀಸಲು ನಿಧಿಗೆ ಸಂಬಂಧಿಸಿದಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪಗಳನ್ನು ಮಾಡಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಈ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಎಂ.ಎಲ್.ಶರ್ಮ ಅವರಿಗೆ ಸುಪ್ರೀಂಕೋರ್ಟ್ 50,000 ರೂ.ಗಳ ದಂಡ ವಿಧಿಸಿದೆ.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಇರುವ ಅಂಶಗಳನ್ನು ಪರಿಗಣಿಸಲು ನಮಗೆ ಯಾವ ಕಾರಣಗಳು ಗೋಚರಿಸುತ್ತಿಲ್ಲ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಈ ಅರ್ಜಿಯನ್ನು ವಜಾಗೊಳಿಸಿತು. ಆರ್ಬಿಐನ ಬಂಡವಾಳು ಮೀಸಲು ನಿಧಿಯನ್ನು ಕಬಳಿಸಲು ಹಣಕಾಸು ಸಚಿವರು ಸಂಚು ರೂಪಿಸಿದ್ದಾರೆ ಎಂದು ವಕೀಲ ಶರ್ಮ ತಮ್ಮ ಪಿಐಎಲ್ ಅರ್ಜಿಯಲ್ಲಿ ಆರೋಪಿಸಿದ್ದರು.
RBI,Arun jaitley,Supreme court