ಹುಲಿ ಸೆರೆಗೆ ಬಂದ ಆನೆಯೇ ನಾಪತ್ತೆ!; ಹುಲಿ ಬಿಟ್ಟು ಸಾಕಾನೆಗಾಗಿ ಹುಡುಕಾಟ ಆರಂಭಿಸಿದ ಸಿಬ್ಬಂದಿ

ಎಚ್​.ಡಿ.ಕೋಟೆಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಬಳಿ ಪ್ರತ್ಯಕ್ಷಗೊಂಡ ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿದ್ದ ಆನೆಯೇ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಇತ್ತೀಚೆಗೆ ಎರಡು ದಿನಗಳಿಂದ ಕಾಣಿಸಿಕೊಂಡ ಹುಲಿ ಹಸುವಿನ ಮೇಲೆ ದಾಳಿ ಮಾಡಿ, ಸಾಯಿಸಿತ್ತು. ಇದರಿಂದ ಭಯಭೀತಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಹುಲಿ ಸೆರೆಗೆ ಮುಂದಾದ ಅರಣ್ಯ ಇಲಾಖೆ, ಕಾರ್ಯಾಚರಣೆಗಾಗಿ ಆನೆಗಳನ್ನು ಬಳಸಿಕೊಂಡಿತ್ತು. ದಸರಾ ಆನೆ ಅರ್ಜುನ ಜೊತೆ ನಾಲ್ಕು ಆನೆಗಳು ಅಂತರಸಂತೆಗೆ ಬಂದಿದ್ದವು. ಹುಲಿ ಪತ್ತೆ ವೇಳೆ ಅರಣ್ಯ ಇಲಾಕೆ ಸಿಡಿಸಿದ ಪಟಾಕಿ ಸದ್ದಿಗೆ ಹೆದರಿದ ಅಶೋಕ ಎಂಬ ಗಂಡಾನೆ, ಮಾವುತನನ್ನು ನೆಲಕ್ಕೆ ಕೆಡವಿ ಕಾಡಿನೊಳಗೆ ಓಡಿದೆ.  ಹುಲಿ ಪತ್ತೆಗೆ ಎಂದು ಬಂದ ಅರಣ್ಯ ಇಲಾಕೆ ಸಿಬ್ಬಂದಿ ಈಗ ಹುಲಿಯನ್ನು ಬಿಟ್ಟು ಓಡಿಹೋದ ಆನೆಯ ಪತ್ತೆಗೆ ಹುಡುಗಾಟ ನಡೆಸಿದ್ದಾರೆ. ಆನೆ ಮೇಲಿಂದ ಬಿದ್ದ ಮಾವುತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ