ನವದೆಹಲಿ, ಡಿ.4-ಎರಡೆಲೆ ಪಕ್ಷದ ಚಿಹ್ನೆ ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಐಎಡಿಎಂಕೆ ಮಾಜಿ ನಾಯಕ ಟಿ.ಟಿ.ವಿ.ದಿನಕರನ್ ವಿರುದ್ಧ ದೆಹಲಿಯ ನ್ಯಾಯಾಲಯವೊಂದು ಇಂದು ಕ್ರಿಮಿನಲ್ ಪಿತೂರಿ ಆರೋಪಗಳನ್ನು ದಾಖಲಿಸಿಕೊಂಡಿದೆ.
ವಿಶೇಷ ನ್ಯಾಯಾಧೀಶರಾದ ಅರುಣ್ ಭಾರದ್ವಾಜ್ ಅವರ ಮುಂದೆ ಹಾಜರಾದ ದಿನಕರನ್ ತಾವು ತಪ್ಪಿತಸ್ಥರಲ್ಲ ಎಂದು ಮನವಿ ಮಾಡಿದರು. ಈ ಪ್ರಕರಣದ ವಿಚಾರಣೆ ಆರಂಭಿಸಿದ ನ್ಯಾಯಾಧೀಶರು ದಿನಕರ್ ವಿರುದ್ಧ ಕ್ರಿಮಿನಲ್ ಒಳಸಂಚು ಆರೋಪಗಳನ್ನು ದಾಖಲಿಸಿದರು.
ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್ 208(ಕ್ರಿಮಿನಲ್ ಪಿತೂರಿ) ಮತ್ತು 201(ಸಾಕ್ಷ್ಯಾಧಾರ ನಾಶ) ಹಾಗೂ ಭ್ರಷ್ಟಾಚಾರ ನಿಗ್ರಹ(ಪಿಸಿ) ಕಾಯ್ದೆ ಅಡಿ ದಿನಕರನ್ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದ ಸಾಕ್ಷ್ಯಾಧಾರಗಳನ್ನು ದಾಖಲಿಸಿಕೊಳ್ಳಲು ನ್ಯಾಯಾಲಯ ಡಿಸೆಂಬರ್ 17ರಿಂದ ವಿಚಾರಣೆ ಆರಂಭಿಸಲಿದೆ.